-->
ads hereindex.jpg
Mangaluru ಯುವಕನ ಅಶ್ಲೀಲ ವೀಡಿಯೋ ರೆಕಾರ್ಡ್:ಹನಿಟ್ರ್ಯಾಪ್ ಗೆ ಬಲೆಗೆ ಕೆಡವಿ 30 ಲಕ್ಷ ರೂ. ವಸೂಲಿ ಮಾಡಿದ ಯುವತಿ ಅರೆಸ್ಟ್

Mangaluru ಯುವಕನ ಅಶ್ಲೀಲ ವೀಡಿಯೋ ರೆಕಾರ್ಡ್:ಹನಿಟ್ರ್ಯಾಪ್ ಗೆ ಬಲೆಗೆ ಕೆಡವಿ 30 ಲಕ್ಷ ರೂ. ವಸೂಲಿ ಮಾಡಿದ ಯುವತಿ ಅರೆಸ್ಟ್


ಪುತ್ತೂರು: ಹನಿಟ್ರ್ಯಾಪ್‌ ಬಲೆಗೆ ಬೀಳಿಸಿ ಯುವಕನಿಂದ ಬರೋಬ್ಬರಿ 30 ಲಕ್ಷ ರೂ‌‌. ವಸೂಲಿ ಮಾಡಿದ ಆರೋಪದ ಮೇಲೆ  ಯುವತಿಯೋರ್ವಳನ್ನು ಪುತ್ತೂರು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. 

ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ, ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸೀರ್ (25)ಎಂಬವರು ಹನಿಟ್ರ್ಯಾಪ್‌ಗೆ ಬಲಿಯಾಗಿ 30 ಲಕ್ಷರೂ. ಕಳಕೊಂಡವರು.

ತನಿಷಾ ಎಂಬಾಕೆ ತನ್ನನ್ನು ಐದು ತಿಂಗಳಿನಿಂದ ಮೆಸೇಜ್ ನಲ್ಲಿ ಮಾತನಾಡುತ್ತಿದ್ದಳು. ಬಳಿಕ ಮಂಗಳೂರಿಗೆ ಒಂದು ಬಾರಿ ಕರೆದಯ ಅಲ್ಲಿಯೂ ಭೇಟಿಯಾಗಿ ಸೆಲ್ಫಿ ಫೋಟೋ ಪಡೆದಿದ್ದಳು. ಬಳಿಕ‌ ವೀಡಿಯೋ ಕಾಲ್ ಮಾಡಿ ತನ್ನ ನಗ್ನ ದೇಹದ ವೀಡಿಯೋ ರೆಕಾರ್ಡ್ ಮಾಡಿದ್ದಳು. ಬಳಿಕ ಆಕೆಯ ಕಡೆಯವರು ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದಲ್ಲಿ ತನ್ನ ನಗ್ನ ವೀಡಿಯೋ ವನ್ನು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಹೆದರಿದ ತಾನು ಹಂತಹಂತವಾಗಿ 30 ಲಕ್ಷ ರೂ. ಅವರಿಗೆ ನೀಡಿದ್ದೆ. ಆದರೆ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಅಬ್ದುಲ್ ನಾಸೀರ್ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸ್ ಮೇಲಾಧಿಕಾರಿಗಳ ಸೂಚನೆಯಂತೆ ಅವರು ನೆಟ್ಟಣಿಗೆ ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯೀದ್‌ ಮೋನು, ನಾಸಿರ್ ಮತ್ತು ಕಾರ್ಕಳದವಳೆಂದು ಪರಿಚಯಿಸಿಕೊಂಡಿದ್ದ ತನೀಷಾ ಎಂಬವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ದೂರು ಸಲ್ಲಿಸಿದ್ದಾರೆ. 

ತನಿಖೆ ಕೈಗೆತ್ತಿಗೊಂಡ ಉಪವಿಭಾಗದ ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ನೇತೃತ್ವದ ಪೊಲೀಸರು ಪ್ರಕರಣದ ಆರೋಪಿಗಳ ಪೈಕಿ ತನೀಶಾ ಎಂಬಾಕೆಯನ್ನು ಬಂಧಿಸಿದ್ದಾರೆ. ಉಳಿದ ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

Ads on article

Advertise in articles 1

advertising articles 2

IMG_20220827_133242

Advertise under the article

IMG-20220907-WA0033 IMG_20220827_133242