
Mangalore;ವೈರಲ್ ಆದ ನಳಿನ್ ಆಡಿಯೋ ಅಸಲಿಯೋ , ನಕಲಿಯೋ ಎಂಬುದನ್ನು ಸಿಎಂ ಸ್ಪಷ್ಟಪಡಿಸಲಿ- ಖಾದರ್ ( Video)
ಮಂಗಳೂರು; ಏರೆಗ್ಲಾ ಪನೊಡ್ಚಿ ಎಂದು ವೈರಲ್ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಆಡಿಯೋ ಬಗ್ಗೆಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಲಿ ಎಂದು ಯು ಟಿ ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಳಿನ್ ಕುಮಾರ್ ಕಟೀಲ್ ಅವರು ಆಡಿಯೋದಲ್ಲಿ ಸಿಎಂ ಬದಲಾವಣೆ ವಿಚಾರ ಮಾತನಾಡಿದ್ದಾರೆ. ಇದು ವೈರಲ್ ಆದ ಬಳಿಕ ನಕಲಿ ಎಂದು ಹೇಳಿದ್ದಾರೆ. ಈ ಆಡಿಯೋ ನಕಲಿಯೋ - ಅಸಲಿಯೋ ಎಂಬುದನ್ನು ಮುಖ್ಯಮಂತ್ರಿ ಹೇಳಲಿ. ಈ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಎಂದರು.
ಇನ್ನೂ ಮುಖ್ಯಮಂತ್ರಿಗಳು ಮುಂದುವರಿಯುತ್ತಾರ ಅಥವಾ ಬದಲಾಗುತ್ತಾರ ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಲಿ ಅವರು ಹೇಳಿದರು.