-->

ಮಾಜಿ ಪ್ರೇಯಸಿಯ ಕೊಲೆಗೆ ಆನ್ಲೈನಲ್ಲಿ ಚಾಕು ಖರೀದಿ! ಮುಂದಾಗಿದ್ದೇನು ಗೊತ್ತಾ...

ಮಾಜಿ ಪ್ರೇಯಸಿಯ ಕೊಲೆಗೆ ಆನ್ಲೈನಲ್ಲಿ ಚಾಕು ಖರೀದಿ! ಮುಂದಾಗಿದ್ದೇನು ಗೊತ್ತಾ...

ಹೈದರಾಬಾದ್(ತೆಲಂಗಾಣ): ಅಮೆಜಾನ್​​ನಲ್ಲಿ ಚಾಕು ಕೊಂಡಿದ್ದ ವ್ಯಕ್ತಿಯನ್ನು ಮಾಜಿ ಪ್ರೇಯಸಿಯ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ ಚಾಕು ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್​​ನ ಬೋರಬಂಡ ಸಮೀಪದ ಬಂಜಾರಾನಗರದಲ್ಲಿ ಘಟನೆ ನಡೆದಿದೆ.

ಶ್ರೀಕಾಂತ್ ಬಂಧಿತ ಆರೋಪಿ. ಸ್ಟಾರ್​ ಹೋಟೆಲ್​ನಲ್ಲಿದ್ದ ಜಿಮ್​ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ 23 ವರ್ಷದ ಯುವತಿಯನ್ನು ಈತ ಪ್ರೀತಿಸುತ್ತಿದ್ದ. ನಾಲ್ಕು ವರ್ಷಗಳ ಹಿಂದಿನ ಪರಸ್ಪರ ಪ್ರೀತಿಯಲ್ಲಿ ವೈಮನಸ್ಯ ಉಂಟಾಗಿ ಇಬ್ಬರೂ ಬೇರೆ ಬೇರೆಯಾಗಿದ್ದರು. ಮಂಗಳವಾರ ಮಧ್ಯರಾತ್ರಿ ಶ್ರೀಕಾಂತ್​​ ಯುವತಿಗೆ ಕರೆ ಮಾಡಿ, ನಿನ್ನೊಂದಿಗೆ ಮಾತನಾಡಬೇಕೆಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಯುವತಿ ತನ್ನ ಮನೆಗೆ ಯುವಕನನ್ನು ಆಹ್ವಾನಿಸುತ್ತಾಳೆ. ಶ್ರೀಕಾಂತ್​ನ ನಡವಳಿಕೆ ಕಂಡು ಯುವತಿಯ ಸೋದರಿಗೆ ಅನುಮಾನ ಮೂಡುತ್ತದೆ.ಅವನ ಬೆನ್ನಲ್ಲಿ ಚಾಕು ಇಟ್ಟುಕೊಂಡಿರುವುದು ಆಕೆಗೆ ಗೊತ್ತಾಗುತ್ತದೆ. ಆಕೆ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸುತ್ತಾಳೆ.

ಶ್ರೀಕಾಂತ್​ನನ್ನು ಈ ವೇಳೆ ವಿಚಾರಣೆಗೆ ಒಳಪಡಿಸಿದಾಗ, ತನ್ನ ಸಹೋದರ ಹುಟ್ಟುಹಬ್ಬದ ಸಲುವಾಗಿ ಒಂದೂವರೆ ಸಾವಿರ ರೂಪಾಯಿಗಳಿಗೆ ಅಮೆಜಾನ್​ನಲ್ಲಿ ಖರೀದಿ ಮಾಡಿರುವುದು ತಿಳಿದುಬಂದಿದೆ. ಮೇಲ್ನೋಟಕ್ಕೆ ಶ್ರೀಕಾಂತ್ ಕೊಲೆ ಮಾಡಲು, ಚಾಕು ಖರೀದಿಸಿರುವುದಾಗಿ ತಿಳಿದುಬಂದಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99