
ಹೊಸ ಟೀಂ ಬರುತ್ತೆ,ಮೂರು ಜನ ಲಿಸ್ಟ್ ನಲ್ಲಿದ್ದಾರೆ... ಸಿಎಂ ಬದಲಾವಣೆ ಬಗ್ಗೆ ನಳಿನ್ ಆಡಿಯೋ ವೈರಲ್- ತನಿಖೆಯಾಗಲಿ ಎಂದ ಕಟೀಲ್ (video)
Sunday, July 18, 2021
ಬೆಂಗಳೂರು; ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗುವ ಬಗ್ಗೆ ನಳಿನ್ ಕುಮಾರ್ ಕಟೀಲ್ ಅವರದೆನ್ನಲಾದ ಆಡಿಯೋದಲ್ಲಿ ಮುನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂಬ ಬಗ್ಗೆ ಬಹಳಷ್ಟು ಸಮಯಗಳಿಂದ ಚರ್ಚೆಗಳಾಗುತ್ತಿದೆ. ಇದರ ನಡುವೆ ನಳಿನ್ ಕುಮಾರ್ ಕಟೀಲ್ ಅವರದೆನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಆತ್ಮೀಯರೊಬ್ಬರಲ್ಲಿ ಮಾತನಾಡುತ್ತಿರುವ ನಳಿನ್ ಕುಮಾರ್ ಕಟೀಲ್ ಅವರು " ಯಾರಿಗೂ ಹೇಳ್ಬೇಡ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಟೀಂ ತೆಗೆಯಲಾಗುತ್ತದೆ. ಹೊಸ ಟೀಂ ಬರಲಿದೆ. ಏನೂ ಆಗುವುದಿಲ್ಲ. ಮೂರು ಜನರ ಹೆಸರು ಇದೆ. ಇಲ್ಲಿನವರು ಆಗುವುದಿಲ್ಲ, ದೆಹಲಿಯಿಂದ ಆಗ್ತದೆ" ಎಂದು ಮಾತನಾಡುತ್ತಿದ್ದಾರೆ. ಈ ಆಡಿಯೋ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಕಟೀಲ್ ನಿರಾಕರಣೆ
ಖಾಸಗಿ ಮಾಧ್ಯಮ ಕ್ಕೆ ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಕಟೀಲ್ ಅವರು ಈ ಆಡಿಯೋ ನಿಜವಾದುದಲ್ಲ. ಈ ಬಗ್ಗೆ ತನಿಖೆಯಾಗಬೇಕು.ಮುಖ್ಯಮಂತ್ರಿ ಗೆ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ.