Header Ad

ಆಡಿಯೋ ವೈರಲ್ ಬಗ್ಗೆ ಮಾಧ್ಯಮದ ಮುಂದೆ ಫಸ್ಟ್ ರಿಯಾಕ್ಷನ್ ನೀಡಿದ ನಳಿನ್- ಏನು ಹೇಳಿದ್ರಾ ಗೊತ್ತಾ? (Video)

ಮಂಗಳೂರು: ನನಗೂ ಆಡಿಯೋಗೂ ಯಾವುದೇ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ತನಿಖೆಯಾಗಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತೇನೆ ಎಂದು ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದಾರೆ.



ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರದ್ದೆನ್ನಲಾದ ಎನ್ನಲಾದ ಆಡಿಯೋ ವೈರಲ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ತನಿಖೆಯ ಬಳಿಕ ಆಡಿಯೋದ ಸತ್ಯಾಸತ್ಯತೆ ಹೊರ ಬರಲಿದೆ.  ನಮ್ಮಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆಗಳಿಲ್ಲ. ಯಡಿಯೂರಪ್ಪ ನಮ್ಮ ಪಾರ್ಟಿಗೆ ಆತ್ಮ. ಅವರು ನಮ್ಮ ಸರ್ವ ಸಮ್ಮತದ ನಾಯಕ ಎಂದು ಹೇಳಿದರು.

ಈಶ್ವರಪ್ಪ, ಜಗದೀಶ್ ಶೆಟ್ಟರ್ ಪಾರ್ಟಿಯ ಎರಡು ಕಣ್ಣುಗಳಿದ್ದಂತೆ. ಈ ಬಗ್ಗೆ ತನಿಖೆಯಾಗದೆ ಯಾರ ಬಗ್ಗೆಯೂ ಸಂಶಯ ವ್ಯಕ್ತಪಡಿಸೋಲ್ಲ. ತನಿಖೆಯ ಮೂಲಕ ಸತ್ಯ ಹೊರಬರಲಿ. ಎಲ್ಲದಕ್ಕೂ ಆ ಬಳಿಕ ಉತ್ತರ ನೀಡುತ್ತೇನೆ. ಇವತ್ತು ಅಧಿವೇಶನಕ್ಕೆ ಹೋಗ್ತಾ ಇದ್ದೇನೆ. ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಇತ್ತೀಚಿನ ಸುದ್ದಿಗಳು