ಕುತೂಹಲ ಹುಟ್ಟಿಸಿದೆ ಶಿಲ್ಪಾಶೆಟ್ಟಿ ಸಹೋದರಿಯ ಇನ್ಸ್ಟಾಗ್ರಾಮ್ ಪೋಸ್ಟ್... ಅದರಲ್ಲಿ ಏನು ಬರೆದಿದ್ದಾರೆ ಗೊತ್ತಾ..?
Friday, July 30, 2021
ಮುಂಬೈ: ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಅವರು ಇತ್ತೀಚೆಗಷ್ಟೇ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಹಾಕಿ ಟಿಪ್ಪಣಿಯೊಂದನ್ನು ಬರೆದುಕೊಂಡಿದ್ದಾರೆ.
ಶಮಿತಾ ಕಪ್ಪು ಬಣ್ಣದ ಟಾಪ್ ಧರಿಸಿರುವ ಸೆಲ್ಫಿ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಲವೊಮ್ಮೆ ನಿಮ್ಮೊಳಗಿನ ಶಕ್ತಿಯು ಎಲ್ಲರಿಗೂ ಕಾಣುವ ಉರಿಯುತ್ತಿರುವ ದೊಡ್ಡ ಜ್ವಾಲೆಯಾಗಿರುವುದಿಲ್ಲ… ನೀವು ಮುಂದುವರಿಯುತ್ತಿರಿ. ನಿಮ್ಮ ಶಕ್ತಿಯನ್ನು ಇತರರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ. ನೀವು ಹೇಳುವ ಅಥವಾ ಮಾಡುವ ಯಾವುದಾದರೂ ಆ ಕ್ಷಣದಲ್ಲಿ ವೈಯಕ್ತಿಕ ವಿಚಾರಗಳೊಂದಿಗೆ ಲೆನ್ಸ್ ಮೂಲಕ ಫಿಲ್ಟರ್ ಆಗುತ್ತದೆ. ಇದು ನಿಮ್ಮ ಬಗ್ಗೆ ಅಲ್ಲ. ಏನೇ ಆಗಲಿ ನಿಮ್ಮ ಕೆಲಸವನ್ನು ಸಾಧ್ಯವಾದಷ್ಟು ಸಮಗ್ರತೆ ಮತ್ತು ಪ್ರೀತಿಯಿಂದ ಮಾಡುತ್ತಲೇ ಇರಿ ಎಂದು ಶಮಿತಾ ಶೆಟ್ಟಿ ಬರೆದುಕೊಂಡಿದ್ದಾರೆ.