ಮನೆಯೊಳಗೆ ಅಕ್ಕ-ತಂಗಿಯ ನಿಗೂಢ ಸಾವು..ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ...!!
Friday, July 30, 2021
ದಾವಣಗೆರೆ: ನಗರದ ಆಂಜನೇಯ ಕಾಟನ್ ಮಿಲ್ ಪ್ರದೇಶದಲ್ಲಿ ಸಹೋದರಿಯರಿಬ್ಬರು ಅನುಮಾನಸ್ಪದವಾಗಿ ಮನೆಯಲ್ಲಿ ಮೃತಪಟ್ಟಿದ್ದಾರೆ..
ಗೌರಮ್ಮ(34) ಮತ್ತು ರಾಧಮ್ಮ(32) ಮೃತ ಸಹೋದರಿಯರು. ಗೌರಮ್ಮನ ಜತೆ ತಂಗಿ ರಾಧಮ್ಮ ಕಳೆದ 10 ವರ್ಷದಿಂದ ವಾಸವಿದ್ದಳು. ಗೌರಮ್ಮಗೆ ಮದುವೆ ಆಗಿದ್ದು, ಗಂಡ ಮಂಜುನಾಥ ಬೇರೆಡೆ ಕೆಲಸ ಮಾಡುತ್ತಿದ್ದ. ಕಳೆದ ವಾರ ಮನೆಗೆ ಬಂದಿದ್ದ ಮಂಜುನಾಥ ಎರಡು ದಿನ ಇದ್ದು ಹೋಗಿದ್ದ. ಇದಾದ ಮೇಲೆ ಐದಾರು ದಿನಗಳಿಂದ ಮನೆಯ ಬಾಗಿಲು ತೆರೆದಿರಲಿಲ್ಲ. ಅಕ್ಕ-ತಂಗಿಯ ಸುಳಿವೂ ಇರಲಿಲ್ಲ. ಅನುಮಾನಗೊಂಡ ಸ್ಥಳೀಯರು ಅವರ ಸಂಬಂಧಿಗಳಿಗೆ ಮಾಹಿತಿ ನೀಡಿದ್ದರು. ಮನೆಯ ಬಾಗಿಲು ಒಡೆದು ತೆರೆದಾಗ ಸಹೋದರಿಯರ ಶವಗಳು ಪತ್ತೆಯಾಗಿವೆ. ಕಳೆದ ವಾರ ಮನೆಗೆ ಬಂದು ಹೋಗಿದ್ದ ಮಂಜುನಾಥನ ಮೇಲೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.