ನೋಟ್ಬುಕ್ ತುಂಬಾ 'I Hate My Life' ಎಂದು ಬರೆದು..9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ...
Friday, July 2, 2021
ರಾಯ್ಪುರ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ 9ನೇ ತರಗತಿಯ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚತ್ತೀಸ್ಗಢದ ಭಿಲೈನ ಪ್ರದೇಶದಲ್ಲಿ ನಡೆದಿದೆ.
9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಚಾಂದಿನಿ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ತಂದೆ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ಸಂಬಂಧಿಯೊಬ್ಬರನ್ನು ನೋಡಲು ಹೋಗಿದ್ದರಂತೆ. ಆ ವೇಳೆ ಬಾಲಕಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಅದನ್ನು ಗಮನಿಸಿದ ಸ್ಥಳೀಯರು ಆಕೆಯ ತಂದೆ ತಾಯಿ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಚಾಂದಿನಿ ರೂಮಿನಲ್ಲಿ ಪರಿಶೀಲನೆ ನಡೆಸಿದಾಗ ಒಂದು ನೋಟ್ ಬುಕ್ ಸಿಕ್ಕಿದೆ. ಅದರಲ್ಲಿ ಆಕೆ ಸುಮಾರು 50 ಪುಟಗಳಲ್ಲಿ ಐ ಹೇಟ್ ಮೈ ಲೈಪ್ ಎಂದು ಬರೆದಿಟ್ಟಿದ್ದಾಳೆ. ಕೆಲವು ಪುಟಗಳಲ್ಲಿ ಒಬ್ಬ ಹುಡುಗ ಹಾಗೂ ಹುಡುಗಿ ಒಟ್ಟಾಗಿ ಕುಳಿತಿರುವ ಚಿತ್ರ ಬರೆದಿದ್ದಾಳೆ. ಇನ್ನೊಂದು ಪುಟದಲ್ಲಿ ಒಬ್ಬ ಹುಡುಗಿ ಒಬ್ಬಂಟಿಯಾಗಿ ಕುಳಿತಿರುವ ಫೋಟೋ ಬರೆದಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣವೇನೆಂಬುದು ತಿಳಿದುಬಂದಿಲ್ಲ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.