
ಒಂದೇ ಸೀರೆಗೆ ಕೊರಳೊಡ್ಡಿದ ಯುವಜೋಡಿಗಳು- ಬೆಚ್ಚಿ ಬೀಳಿಸುವಂತಿತ್ತು ವಾಟ್ಸಪ್ ಸ್ಟೇಟಸ್....
Friday, July 2, 2021
ಹೈದರಾಬಾದ್: ಒಟ್ಟಿಗೆ ಮದುವೆ ಆಗಿ ಜೀವನ ನಡೆಸಲು ಜಾತಿ ಬೇರೆ ಬೇರೆ ಆಗಿರುವ ಹಿನ್ನೆಲೆ ಯುವ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ನಿಶಿತಾ (18) ಮತ್ತು ಹರೀಶ್ (21) ಮೃತ ದುರ್ದೈವಿಗಳು. ನಿಶಿತಾ ಇತ್ತಿಚೆಗಷ್ಟೇ ಇಂಟರ್ನ್‌ಶಿಪ್ ಮುಗಿಸಿದ್ದಳು ಮುಗಿಸಿದ್ದಳು. ಹರೀಶ್ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದ. ಇಬ್ಬರ ನಡುವೆ ಪ್ರೀತಿ ಯಾಗಿದ್ದು ಜಾತಿ ಬೇರೆ ಬೇರೆ ಆಗಿರುವುದರಿಂದ ಹಿರಿಯರು ತಮ್ಮ ಮದುವೆ ಒಪ್ಪುವುದಿಲ್ಲ ಅಂದುಕೊಂಡು ಇಬ್ಬರು ಮನೆಯೊಂದರಲ್ಲಿ ಒಂದೇ ಸೀರೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಮ್ಮಿಬ್ಬರನ್ನು ಒಟ್ಟಿಗೆ ಇರಲು ಬಿಡುವುದಿಲ್ಲ. ಹೀಗಾಗಿ ನಾವು ಸಾಯುತ್ತಿದ್ದೇವೆ. ನಮ್ಮನ್ನು ಕ್ಷಮಿಸಿ ಎಂದು ಸಾಯುವ ಮುನ್ನ ಹರೀಶ್ ತನ್ನ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದಾರೆ. ಇದು ಸ್ನೇಹಿತರು ಮತ್ತು ಮನೆಯವರಿಗೆ ತಿಳಿದು, ಅವರಿಗಾಗಿ ಹುಡುಕಾಡಿದಾಗ ಮನೆಯಲ್ಲೇ ಇಬ್ಬರ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.