ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಯೊಂದಿಗೆ ಪ್ರಭಾಸ್ ಅಭಿನಯಿಸುತ್ತಿರುವ ಮುಂದಿನ ಚಿತ್ರ ಯಾವುದು ಗೊತ್ತಾ..? ಶೂಟಿಂಗ್ ಆರಂಭ..
ಹೈದರಾಬಾದ್: ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ ಮತ್ತು ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ಅವರೊಂದಿಗೆ ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಅಭಿನಯಿಸುತ್ತಿರುವ ಮುಂದಿನ ಚಿತ್ರಕ್ಕೆ ಮೂಹರ್ತ ನೆರವೇರಿಸಲಾಯಿತು.
ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಪೌರಾಣಿಕ ಹಾಗೂ ಫ್ಯಾಂಟಸಿ ಕತೆಯನ್ನು ಒಳಗೊಂಡಿರಲಿದೆ. ಬಾಲಿವುಡ್ನ ಇಬ್ಬರು ತಾರೆಯರೊಂದಿಗೆ ಪ್ರಭಾಸ್ ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇಂದು ಅಧಿಕೃತವಾಗಿ ಪ್ರಭಾಸ್ ಸಿನಿಮಾಕ್ಕೆ ಕ್ಲಾಪ್ ಮಾಡಿದರು. ಈ ಮೂಲಕ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ. ಈ ಕುರಿತಂತೆ ವೈಜಂಯತಿ ಪ್ರೋಡಕ್ಷನ್ ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ.