
ಬರ್ಲಿನ್ ನಲ್ಲಿ ಟಾಪ್ ಕಳಚಿದ ಮಹಿಳೆಯರು, ಹೆಂಗಸರ ಒಳ ಉಡುಪು ಧರಿಸಿದ ಗಂಡಸರು..! ಕಾರಣ ಏನು ಗೊತ್ತಾ?
ಬರ್ಲಿನ್: ಲಿಂಗ ಸಮಾನತೆ ಬಗ್ಗೆ ಮಾತುಗಳು ಕೇಳಿ ಬರುತ್ತಲೇ ಇರುತ್ತೇವೆ. ಈಗಲೂ ಲಿಂಗ ಭೇದ ನಡೆಸುವುದು ಹಲವು ಕಡೆಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿಯ ಲಿಂಗಭೇದ ಪ್ರಕರಣವೊಂದರಿಂದಾಗಿ ಸಿಟ್ಟಿಗೆದ್ದ ಸಾರ್ವಜನಿಕರು ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ಜರ್ಮನಿಯ ಬರ್ಲಿನ್ನಲ್ಲಿ ನಡೆದಿದೆ.
ಇತ್ತೀಚೆಗೆ ಬರ್ಲಿನ್ನ ವಾಟರ್ ಪಾರ್ಕ್ ನಲ್ಲಿ ಟಾಪ್ ಕಳಚಿ ಮಹಿಳೆಯೊಬ್ಬಳು ಸನ್ಬಾತ್ ಮಾಡುತ್ತಿದ್ದಳು. ಈ ಸಂದರ್ಭ ಅಲ್ಲಿಗೆ ಬಂದಿರುವ ಪೊಲೀಸರು ಆಕೆಗೆ ಟಾಪ್ ಹಾಕಿಕೊಳ್ಳಲು ಹೇಳಿದ್ದಾರೆ. ಆದರೆ ಆಕೆ ಅದಕ್ಕೆ ಒಪ್ಪಲೇ ಇಲ್ಲ. ಪುರುಷರೂ ಕೂಡ ಶರ್ಟ್, ಟಿ ಶರ್ಟ್ ಧರಿಸದೆಯೇ ಸನ್ಬಾತ್ ಮಾಡುತ್ತಾರೆ. ನಾನೇಕೆ ಮಾಡಬಾರದು ಎಂದು ಪ್ರಶ್ನಿಸಿದ್ದಾಳೆ.
ಅದೇ ಕಾರಣಕ್ಕೆ ಅವಳನ್ನು ಪಾರ್ಕ್ನ ಹೊರದಬ್ಬಲಾಗಿದೆ. ಈ ವಿಚಾರ ಎಲ್ಲೆಡೆ ಹರಿದಾಡಿದೆ. ಇದರಿಂದ ಆಕ್ರೋಶಿತರಾದ ಜನಸಾಮಾನ್ಯರು ಜುಲೈ 10ರಂದು ನೂರಾರು ಮಂದಿ ಒಟ್ಟು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಯರು ಟಾಪ್ ಹಾಕದೆ ಅರೆ ನಗ್ನವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆ, ಪುರುಷರು ಬ್ರಾ ತೊಟ್ಟು ಸೈಕಲ್ ಸವಾರಿ ಮಾಡಿದ್ದಾರೆ. ಮಹಿಳೆಯರು ತಮ್ಮ ದೇಹದ ಮೇಲೆ ‘ಮೈ ಬಾಡಿ, ಮೈ ಚಾಯ್ಸ್’ ಸೇರಿ ಅನೇಕ ರೀತಿಯ ಸ್ಲೋಗನ್ ಬರೆದುಕೊಂಡು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ.