
ಪತಿ-ಪತ್ನಿಯ ಜಗಳ: ಮಕ್ಕಳನ್ನು ನೆಲಕ್ಕೆ ಬಡಿದ ಪಾಪಿ ತಂದೆ; ಒಂದು ಮಗು ಸಾವು!
ಶುಕ್ರವಾರ ಹೆಂಡತಿಯ ಜೊತೆ ಯಾವುದೋ ವಿಚಾರಕ್ಕೆ ಜಗಳವಾಡಿದ ಪ್ರಸಾದ್ ಎಂಬಾತ, ತನ್ನ ಇಬ್ಬರು ಮಕ್ಕಳನ್ನು ಎತ್ತಿ ನೆಲಕ್ಕೆ ಬಡಿದಿದ್ದಾನೆ. ಎರಡು ವರ್ಷದ ಹೆಣ್ಣು ಮಗು ಪ್ರಣವಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐದು ವರ್ಷದ ಮಗುವಿಗೆ ಗಂಭೀರವಾಗಿ ಗಾಯವಾಗಿದೆ.
ಸ್ಥಳೀಯರು ತಂದೆಗೆ ಥಳಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.