
ಪತ್ನಿ ಕಿರಣ್ ರಾವ್ ಇಲ್ಲದೇ ನನ್ನ ಜೀವನ ಇಲ್ಲ : ನಟ ಅಮೀರ್ ಖಾನ್
Saturday, July 3, 2021
ಹೈದರಾಬಾದ್: ಬಾಲಿವುಡ್ನ ನಟ ಅಮೀರ್ ಖಾನ್ 15 ವರ್ಷಗಳ ನಂತರ ಪತ್ನಿ ಕಿರಣ್ ರಾವ್ಗೆ ವಿಚ್ಛೇದನ ನೀಡಿದ್ದಾರೆ.
ಈ ಹಿಂದಿನ ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಇಲ್ಲದೇ ನನ್ನ ಜೀವನ ಇಲ್ಲ. ಅದನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು. ಅವಳನ್ನ ಪಡೆದುಕೊಳ್ಳಲು ನಾನು ಪುಣ್ಯ ಮಾಡಿದ್ದು, ಅದಕ್ಕಾಗಿ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದರು. ಆದರೆ ಇದೀಗ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ.
ಸುಮಾರು 15 ವರ್ಷಗಳ ಕಾಲ ಸಂತೋಷವಾಗಿ ಜೀವನ ನಡೆಸಿರುವ ಅವರು ಇದೀಗ ಪ್ರತ್ಯೇಕವಾಗಿ ಜೀವನ ನಡೆಸಲು ಮುಂದಾಗಿದ್ದಾರೆ. ಅಮೀರ್ ಖಾನ್, ಈ ಹಿಂದೆ ರೀನಾ ದತ್ತಾ ಜೊತೆ ಮದುವೆ ಮಾಡಿಕೊಂಡಿದ್ದರು. ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ.