ಯಶಿಕಾ ಕಾರು ಅಪಘಾತ ಪ್ರಕರಣ.. ಸ್ನೇಹಿತ ಭವಾನಿ ತೊಟ್ಟ ಉಡುಗೆಯೇ ಈ ಅಪಘಾತಕ್ಕೆ ಕಾರಣವಾಯ್ತ..??
Wednesday, July 28, 2021
ಚೆನ್ನೈ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಕಾಲಿವುಡ್ ನಟಿ ಯಶಿಕಾ ಆನಂದ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದಲ್ಲಿ ಯಶಿಕಾ ಅವರ ಸ್ನೇಹಿತೆ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದೀಗ ಅಪಘಾತಕ್ಕೆ ಕಾರಣ ಏನೆಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಪೊಲೀಸ್ ವರದಿಗಳ ಪ್ರಕಾರ ಮಿಡ್ನೈಟ್ ಪಾರ್ಟಿಯ ಬಳಿಕ ಯಶಿಕಾ, ಭವಾನಿ ಮತ್ತು ಇಬ್ಬರು ಪುರುಷ ಸ್ನೇಹಿತರು ಮಹಾಬಲಿಪುರ ಏರಿಯಾದಲ್ಲಿ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಕಾರು ಚಲಾಯಿಸುವಾಗ ಏರು ಧ್ವನಿಯಲ್ಲಿ ಮ್ಯೂಸಿಕ್ ಹಾಕಲಾಗಿತ್ತೆನ್ನಲಾಗಿದೆ. ಇದಲ್ಲದೆ, ಕಾರಿನ ಮೇಲಿನ ಸನ್ರೂಫ್ ತೆರೆದು ಅದರಲ್ಲಿ ಮೃತ ಭವಾನಿ ಸೀಟಿನ ಮೇಲೆಯೇ ನಿಂತು ತಲೆಯನ್ನು ಹೊರಗೆ ತೂರಿಸಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಳು ಎನ್ನಲಾಗಿದೆ.
ಈ ವೇಳೆ ಆಕೆಯ ಉಡುಗೆ ಗಾಳಿಗೆ ಬೀಸಿ ದುರಾದೃಷ್ಟವಶಾತ್ ಯಶಿಕಾ ಮುಖವನ್ನು ಮುಚ್ಚಿದೆ. ಮುಂದೆ ಏನೂ ಕಾಣದಿದ್ದಾಗ ಸಹಜವಾಗಿಯೇ ಯಶಿಕಾಗೆ ಗಾಬರಿ ಆಗಿ, ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದಾದ ಮರುಕ್ಷಣವೇ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.