ಬೆತ್ತಲೆ ವಿಡಿಯೋ ನಿರ್ಮಾಣ - ಈ ಮಾಡೆಲ್ ಗೆ ಪ್ರತಿ ದಿನಕ್ಕೆ 70 ಸಾವಿರ ಆಫರ್ ಬಂದಿತ್ತಂತೆ!
Thursday, July 29, 2021
ಮುಂಬೈ: ಮಾಡೆಲ್ ಜೊಯಾ ರಾಥೋಡ್ ಅವರು ರಾಜ್ ಕುಂದ್ರಾರಿಂದ ಆಫರ್ ಸ್ವೀಕರಿಸಿದ್ದಾಗಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ.
ಹಾಟ್ಶಾಟ್ಸ್ ಆ್ಯಪ್ಗಾಗಿ ವಯಸ್ಕರ ಸಿನಿಮಾಗಳಲ್ಲಿ ನಟಿಸುವಂತೆ ಕುಂದ್ರಾ ಅವರ ಆಪ್ತ ಸಹಾಯಕ ಮತ್ತು ಉದ್ಯಮ ಪಾಲುದಾರ ಉಮೇಶ್ ಕಾಮತ್, ಅನೇಕ ಬಾರಿ ನನಗೆ ಕರೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಬಂಧನಕ್ಕೂ ಮುಂಚೆ ಕಾಮತ್ ಜೊಯಾಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದರಂತೆ. ನಾನು ಹೊರಗಿರುವುದರಿಂದ ಆಫೀಸ್ನಲ್ಲಿ ಆಡಿಷನ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ಕಾಮತ್, ವಾಟ್ಸ್ಆ್ಯಪ್ ಮೂಲಕವೇ ಬೆತ್ತಲೇ ಆಡಿಷನ್ ನೀಡುವಂತೆ ಜೊಯಾಗೆ ಕೇಳಿದ್ದರೆಂದು ಆರೋಪಿಸಿದ್ದಾರೆ.
ಸ್ಕ್ರಿಪ್ಟ್ ತಿಳಿಯದೇ ಬೆತ್ತಲೆ ಆಡಿಷನ್ ಕೊಡಲಾಗದು ಎಂದು ಜೊಯಾ ನಿರಾಕರಿಸಿದರೂ ಆಫರ್ ಒಪ್ಪಿಕೊಳ್ಳುವಂತೆ ಕಾಮತ್ ದುಂಬಾಲು ಬಿದ್ದಿದ್ದನಂತೆ. ವಯಸ್ಕರ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡರೆ ದಿನಕ್ಕೆ 70 ಸಾವಿರ ರೂ. ಕೊಡುವುದಾಗಿ ಆಫರ್ ಮಾಡಿದ ಎಂದು ಜೊಯಾ ಆರೋಪ ಮಾಡಿದ್ದಾರೆ. ಮನವೊಲಿಸಲು ಸಾಕಷ್ಟು ಮನಸ್ಸು ಮಾಡಿದ್ದರು. ಆದರೆ, ನಾನು ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ ಜೊಯಾ.