ಇಲ್ಲಿ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾಂಡೋಮ್ ವಿತರಣೆ!
Tuesday, July 13, 2021
ವಾಷಿಂಗ್ಟನ್: ಐದನೆಯ ಹಾಗೂ ಅದಕ್ಕಿಂತ ಹೆಚ್ಚಿನ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲೇ ಕಾಂಡೋಮ್‌ಗಳನ್ನು ನೀಡುವ ಮೂಲಕ ಅಮೆರಿಕದ ಚಿಕಾಗೊ ಪಬ್ಲಿಕ್ ಸ್ಕೂಲ್ಸ್ ಬೋರ್ಡ್ ಆಫ್ ಎಜುಕೇಶನ್ ಸಂಸ್ಥೆ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ಈ ಶೈಕ್ಷಣಿಕ ವರ್ಷದಿಂದಲೇ ಸಂಸ್ಥೆಯ ಅಧೀನದಲ್ಲಿರುವ 600 ಶಾಲೆಗಳಿಗೆ ಈ ನಿಯಮ ಅನ್ವಯಿಸಲಿದೆಯಂತೆ.
2020ರ ಡಿಸೆಂಬರ್‌ನಲ್ಲೇ ಸಿಪಿಎಸ್ ಮಂಡಳಿ ಲೈಂಗಿಕ ಶಿಕ್ಷಣ ವಿಧಾನದ ಪಠ್ಯವನ್ನು ರೂಪಿಸಿದ್ದು, ಈ ಮೂಲಕ ಅಲ್ಲಿನ ಪ್ರಾಥಮಿಕ ಶಾಲೆಗಳಲ್ಲಿ 250, ಪ್ರೌಢ ಶಾಲೆಗಳಲ್ಲಿ 1,000 ವರೆಗೆ ಕಾಂಡೋಮ್‌ಗಳು ಲಭ್ಯವಿರುತ್ತವೆ. ಚಿಕಾಗೊ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕಾಂಡೋಮ್‌ಗಳನ್ನು ಸರಬರಾಜು ಮಾಡಲಾಗುತ್ತದೆ. ಕಾಂಡೋಮ್‌ಗಳು ಖಾಲಿಯಾದಲ್ಲಿ ಪ್ರಾಂಶುಪಾಲರು ಆರೋಗ್ಯ ಇಲಾಖೆಗೆ ತಿಳಿಸಿ, ಮತ್ತೆ ಪಡೆಯಬಹುದಾಗಿದೆ. ಆರೋಗ್ಯ ಸಂಬಂಧ ಸರಿಯಾದ ನಿರ್ಧಾರವನ್ನು ಕೈಗೊಳ್ಳುವ ಹಕ್ಕು ಯುವಕರಿಗೆ ಇದೆ.
ಚಿಕಾಗೊ ಪಬ್ಲಿಕ್ ಸ್ಕೂಲ್ ಬೋರ್ಡ್
ಕಾಂಡೋಮ್‌ಗಳನ್ನು ಒದಗಿಸುವುದರ ಜೊತೆಗೆ, ಲೈಂಗಿಕ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಅಂಗ ರಚನಾಶಾಸ್ತ್ರ, ಹದಿಹರೆಯದ ಬದಲಾವಣೆಗಳು, ಲೈಂಗಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಕಲಿಸುತ್ತದೆ. ಆದರೆ ಕೆಲ ಪೋಷಕರು 5ನೇ ತರಗತಿ ವಿದ್ಯಾರ್ಥಿಗಳಿಗೆ ಕಾಂಡೋಮ್‌ಗಳನ್ನು ನೀಡುವ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಐದನೇ ತರಗತಿ ಎಂದರೆ 12 ವರ್ಷ ವಯಸ್ಸಿನವರು. ಈ ಮಕ್ಕಳಿಗೆ ನಿಜವಾಗಿಯೂ ಕಾಂಡೋಮ್ ನೀಡುವ ಯೋಚನೆ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ.