ಮೀನುಗಳಲ್ಲಿ ವಿಶೇಷ ಮೀನು ಇದು..ಒಂದು ಕೆಜಿಗೆ 5ರಿಂದ 17 ಸಾವಿರ..!!
Wednesday, July 21, 2021
ಗೋದಾವರಿ : ಇಲ್ಲೊಂದು ಜಾತಿಯ ಮೀನಿಗೆ 5 ಸಾವಿರದಿಂದ 17 ಸಾವಿರದವರೆಗೂ ಬೆಲೆ ಕಟ್ಟಲಾಗುತ್ತದೆ ಯಾಕಂದ್ರೆ ಈ ಮೀನುಗಳೇ ಅಪರೂಪ.
ಹೌದು ಆಂಧ್ರ ಪ್ರದೇಶದ ಗೋದಾವರಿ ನದಿಯಲ್ಲಿ ಮುಂಗಾರಿನಲ್ಲಿ ಸಿಗುವ ಪುಲಸಾ (Pulasa) ಹೆಸರಿನ ಈ ಮೀನು ತುಂಬಾ ದುಬಾರಿ.
ಮುಂಗಾರಿನ ಈ ಸಮಯದಲ್ಲಿ ಈ ಪುಲಸ ಮೀನಿಗೆ ಭಾರೀ ಡಿಮ್ಯಾಂಡು. ಮಾರುಕಟ್ಟೆಯ ಮಾಹಿತಿ ಪ್ರಕಾರ ಈ ಪುಲಸಾ ಮೀನು ನಿತ್ಯ 50 ಕೆಜಿಯವರೆಗೆ ಮಾರಾಟವಾಗುತ್ತದೆಯಂತೆ. ಇದನ್ನು ಹಿಸ್ಲಾ ಮೀನು ಅಂತಾ ಕೂಡ ಕರೆಯುತ್ತಾರೆ. ಕೇವಲ ಆಂಧ್ರದಲ್ಲಿ ಮಾತ್ರವಲ್ಲದೆ ತೆಲಂಗಾಣ, ತಮಿಳುನಾಡು, ಕರ್ನಾಟಕದಲ್ಲಿಯೂ ಇದರ ಮಾರಾಟವಿದೆ.