-->

ಸೆ.27ರಿಂದ ಈ ಸ್ಮಾರ್ಟ್ ಫೋನ್ ಗಳಲ್ಲಿ ಯೂಟ್ಯೂಬ್, ಇಮೇಲ್ ಸೇರಿದಂತೆ ಹಲವು ಆ್ಯಪ್ ಗಳು ಕಾರ್ಯ ಸ್ಥಗಿತ: ಗೂಗಲ್ ಶಾಕ್

ಸೆ.27ರಿಂದ ಈ ಸ್ಮಾರ್ಟ್ ಫೋನ್ ಗಳಲ್ಲಿ ಯೂಟ್ಯೂಬ್, ಇಮೇಲ್ ಸೇರಿದಂತೆ ಹಲವು ಆ್ಯಪ್ ಗಳು ಕಾರ್ಯ ಸ್ಥಗಿತ: ಗೂಗಲ್ ಶಾಕ್


ನವದೆಹಲಿ: ಇನ್ನು ಮುಂದೆ 2.3.7 ಅಥವಾ ತುಂಬಾ ಕಡಿಮೆ ವರ್ಷನ್​ನ ಆ್ಯಂಡ್ರಾಯ್ಡ್​ ಮೊಬೈಲ್​ ಫೋನ್ ಗಳಲ್ಲಿ ಕೆಲವೊಂದು ಖಾತೆಗಳಿಗೆ ಸೈನ್​ ಇನ್​ ಆಗಲು ಗೂಗಲ್​ ಬೆಂಬಲಿಸುವುದಿಲ್ಲ ಎಂದು ಟೆಕ್​ ದೈತ್ಯ ಗೂಗಲ್​​ ಶಾಕಿಂಗ್​ ನ್ಯೂಸೊಂದನ್ನು ನೀಡಿದೆ.

ಈ ನಿಯಮ ಸೆಪ್ಟೆಂಬರ್​ 27 ರಿಂದ ಜಾರಿಗೆ ಬರಲಿದೆ ಎಂದು ಗೂಗಲ್​ ಬಳಕೆದಾರರಿಗೆ ಕಳುಹಿಸಿರುವ ಇಮೇಲ್​ನಿಂದ ತಿಳಿದು ಬಂದಿದೆ. ಸೆಪ್ಟೆಂಬರ್​ ಬಳಿಕವೂ ಗೂಗಲ್​ ಆ್ಯಪ್ಸ್​ ಬಳಸುವುದಾದರೆ, ಕನಿಷ್ಟ ಪಕ್ಷ ಆ್ಯಂಡ್ರಾಯ್ಡ್​ 3.0 ಹನಿಕೂಂಬ್​ ವರ್ಸನ್​ಗೆ ಅಪ್​ಡೇಟ್​ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಇಮೇಲ್​ ಸೂಚಿಸಿದೆ. ಗೂಗಲ್​ ಈ ನಿಯಮದಿಂದ ಫೋನ್​ ಬ್ರೌಸರ್​ ಮೂಲಕ ಸೈನ್​ ಇನ್​ ಆಗುವ ಜಿಮೇಲ್​, ಗೂಗಲ್​ ಸರ್ಚ್​, ಗೂಗಲ್​ ಡ್ರೈವ್​, ಯೂಟ್ಯೂಬ್​ ಮತ್ತು ಇತರ ಗೂಗಲ್​ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.

ಆಂಡ್ರಾಯ್ಡ್‌ನ ಅತ್ಯಂತ ಹಳೆಯ ವರ್ಷನ್ ಬಳಕೆದಾರರು ಬಹಳ ಕಡಿಮೆ ಇರಬಹುದು ಮತ್ತು ಗೂಗಲ್ ನಿಸ್ಸಂಶಯವಾಗಿ ಬಳಕೆದಾರರ ಡೇಟಾವನ್ನು ರಕ್ಷಿಸಲು ಮತ್ತು ಖಾತೆಯ ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದೆ. ಸೆಪ್ಟೆಂಬರ್​ 27ರ ಆರಂಭದಿಂದ ಆ್ಯಂಡ್ರಾಯ್ಡ್​ 2.3.7 ಮತ್ತು ಅದಕ್ಕಿಂತ ಕಡಿಮೆ ವರ್ಸನ್​ ಸ್ಮಾರ್ಟ್​ ಫೋನ್​ಗಳಲ್ಲಿ ಯಾವುದೇ ಗೂಗಲ್​ ಆ್ಯಪ್ಸ್​ಗೆ ಲಾಗಿನ್​ ಆಗಲು ಪ್ರಯತ್ನಿಸಿದರೆ, “ಯೂಸರ್​ ನೇಮ್​ ಅಥವಾ ಪಾಸ್​ವರ್ಡ್​ ಎರರ್​” ಎಂಬ ಸಂದೇಶವು ಬರಲಿದೆ. ಹಳೆಯ ಸಾಫ್ಟ್‌ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಕೆಲವು ಬಳಕೆದಾರರಿಗೆ ಈ ಇಮೇಲ್‌ಗಳು ಎಚ್ಚರಿಕೆಯ ಚಿಹ್ನೆಯಾಗಿ ಕಾಣುತ್ತಿವೆ. ಇದು ತಮ್ಮ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಲು ಅಥವಾ ಫೋನ್‌ಗಳನ್ನು ಬದಲಾಯಿಸಲು ಸೂಚನೆ ನೀಡುವಂತಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99