21 ವರ್ಷದ ಡಿಗ್ರಿ ವಿದ್ಯಾರ್ಥಿನಿ ಈಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ..! ಕಿರಿ ವಯಸ್ಸಿಗೆ ರಾಜಕೀಯಕ್ಕಿಳಿದ ಯುವತಿ..
Tuesday, July 13, 2021
ಲಖನೌ: ಉತ್ತರ ಪ್ರದೇಶದ ಬಲರಾಂಪುರದಲ್ಲಿ 21 ವರ್ಷದ ಯುವತಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾಳೆ.
ಆರತಿ ಎಂಎಲ್ಕೆ ಪಿಜಿ ಕಾಲೇಜಿನಲ್ಲಿ 3ನೇ ವರ್ಷದ ಬಿಎ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ. ಆಕೆಯ ಅಂಕಲ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಆತನಿಗೆ ಆ ಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾ ಪಂಚಾಯಿತಿ ಟಿಕೆಟ್ ನೀಡಲಾಗಿತ್ತಂತೆ. ಆದರೆ ವಿರೋಧ ಪಕ್ಷಗಳ ಅಭ್ಯರ್ಥಿಗಳನ್ನು ತಲೆಯಲ್ಲಿಟ್ಟುಕೊಂಡ ಆತ ಆರತಿಗೆ ಸೀಟು ಬಿಟ್ಟುಕೊಟ್ಟಿದ್ದಾನೆ.
ಆಕೆ ಹೆಚ್ಚಿನ ಅಂತರದೊಂದಿಗೆ ಜಯ ಸಾಧಿಸಿದ್ದಳು. ಇದೀಗ ಆಕೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಬಲರಾಂಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ವಾತಿ, ಆರತಿಗೆ ಪ್ರಮಾಣ ವಚನ ನೀಡಿದ್ದಾರೆ. ಆರತಿಯ ಜತೆ ಪಂಚಾಯಿತಿಯ 40 ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.