
ಅಪ್ರಾಪ್ತೆಯ ಅತ್ಯಾಚಾರ ಆರೋಪ: ಹಿಂದಿ ಕಿರುತೆರೆ ನಟನ ಬಂಧನ
Saturday, June 5, 2021
ಮುಂಬೈ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಮುಂಬೈ ಪೊಲೀಸರು ಖ್ಯಾತ ಕಿರುತರೆ ನಟ ಪರ್ಲ್ ವಿ ಪುರಿ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಮುಂಬೈನ ಮಲಾಡ್ ನಲ್ಲಿರುವ ಮಲ್ವಾನಿ ಪೊಲೀಸರು ಮಾಲ್ವಾನಿ ಪೊಲೀಸರು ಪರ್ಲ್ ವಿ ಪುರಿ ಸೇರಿದಂತೆ ಆರು ಮಂದಿಯನ್ನು ಪೊಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ. ಕಾರಿನಲ್ಲಿ ಮೊದಲು ಅತ್ಯಾಚಾರ ನಡೆಸಿದ್ದು, ಬಳಿಕ ಆರೋಪಿಗಳು ಪದೇ ಪದೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಪರ್ಲ್ ವಿ ಪುರಿ ಸೇರಿದಂತೆ ಇತರ ಆರೋಪಗಳನ್ನು ನಿನ್ನೆ ರಾತ್ರಿ ಪೊಲೀಸರು ಬಂಧಿಸಿದ್ದಾರೆ
ಪರ್ಲ್ ವಿ ಪುರಿ 2013ರಲ್ಲಿ 'ದಿಲ್ ಕಿ ನಝರ್ ಸೆ ಖೂಬ್ ಸೂರತ್' ಧಾರವಾಹಿಯಲ್ಲಿ ಪೋಷಕ ನಟನಾಗಿ ನಟನೆ ಆರಂಭಿಸಿದ್ದು ಬಳಿಕ ನಾಗಿನ್ 3, ಬೆಪನಾ ಪ್ಯಾರ್, ಬ್ರಹ್ಮರಾಕ್ಷಸ್ 2 ನಲ್ಲಿ ನಟಿಸಿದ್ದರು. ಇವರ ಮೇಲಿನ ಅತ್ಯಾಚಾರ ಆರೋಪವನ್ನು ಸಹ ಕಿರುತೆರೆ ನಟರು ಅಲ್ಲಗಳೆದಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿ. ಆರೋಪದಿಂದ ಶೀಘ್ರವೇ ಮುಕ್ತರಾಗಿ ಪುರಿ ಬರುತ್ತಾರೆ ಎಂದಿದ್ದಾರೆ.