ಗಂಡನನ್ನೇ ಕೊಂದು ಆತನ ಮರ್ಮಾಂಗವನ್ನು ಫ್ರೈ ಮಾಡಿದ ಮಡದಿ!
Saturday, June 12, 2021
ಬ್ರೆಸಿಲಿಯಾ: ಮಡದಿಯೋರ್ವಳು ತನ್ನ ಗಂಡನನ್ನೇ ಕೊಂದು, ಆತನ ಮರ್ಮಾಂಗವನ್ನೇ ಎಣ್ಣೆಯಲ್ಲಿ ಫ್ರೈ ಮಾಡಿರುವ ವಿಚಿತ್ರವಾದ ಘಟನೆ ಬ್ರೆಜಿಲ್ನ ಸಾವೊ ಗೊನ್ಕಾಲೊ ನಗರದಲ್ಲಿ ನಡೆದಿದೆ.
ಕ್ರಿಸ್ಟಿನಾ ರೊಡ್ರಿಗಸ್ ಮಸಾಡೊ ಎಂಬಾಕೆಯೇ ಗಂಡನನ್ನು ಕೊಂದು ಆತನ ಮರ್ಮಾಂಗವನ್ನು ಫ್ರೈ ಮಾಡಿದಾತೆ.
ಕ್ರಿಸ್ಟಿನಾ ರೊಡ್ರಿಗಸ್ ಮಸಾಡೊ ಹಾಗೂ ಆ್ಯಂಡ್ರೆ ದಂಪತಿ ಬ್ರೆಜಿಲ್ನ ಸಾವೊ ಗೊನ್ಕಾಲೊ ನಗರದಲ್ಲಿ ವಾಸಿಸುತ್ತಿದ್ದು, ದಂಪತಿಗೆ ಎಂಟು ವರ್ಷದ ಪುತ್ರ ಹಾಗೂ ಐದು ವರ್ಷದ ಪುತ್ರಿಯಿದ್ದಾಳೆ. ಈ ದಂಪತಿ ನಡುವೆ ಸಾಮರಸ್ಯವಿಲ್ಲದೆ ಹತ್ತು ವರ್ಷಗಳಿಂದ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಇದೀಗ ಎರಡು ವರ್ಷಗಳಿಂದ ಒಂದಾಗಿ ಜೀವನ ನಡೆಸುತ್ತಿದ್ದರಂತೆ. ಆದರೂ ದಂಪತಿ ನಡುವೆ ಸದಾ ಒಂದಿಲ್ಲೊಂದು ಜಗಳ ಆಗುತ್ತಲೇ ಇರುತ್ತಿತ್ತಂತೆ.
ಎಂದಿತೆ ಇತ್ತೀಚೆಗೆ ದಂಪತಿ ನಡುವೆ ಜಗಳವಾಗಿದ್ದು, ಕ್ರಿಸ್ಟಿನಾ ಮುಂಜಾವು 4ಗಂಟೆ ಹೊತ್ತಿಗೆ ಆ್ಯಂಡ್ರೆಯ ಕೊಲೆ ಮಾಡಿದ್ದಾಳೆ. ಬಳಿಕ ಆತನ ಮರ್ಮಾಂಗವನ್ನು ಕತ್ತರಿಸಿ, ಅದಕ್ಕೆ ಫ್ರೈ ಮಾಡಿದ್ದಾಳೆ ಎನ್ನಲಾಗಿದೆ. ಆ್ಯಂಡ್ರೆ ವಿಚಾರ ತಿಳಿದ ಪೊಲೀಸರು ಮನೆಗೆ ಹೋಗಿ ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ.
ಕ್ರಿಸ್ಟಿನಾಳಿಗೆ ಆ್ಯಂಡ್ರೆ ಹಿಂಸೆ ಕೊಡುತ್ತಿದ್ದ. ವಿಚ್ಚೇದನ ಪಡೆಯವುದಕ್ಕೂ ಬಿಟ್ಟಿರಲಿಲ್ಲ. ಬೇರೆಯವರೊಂದಿಗೆ ನೀನು ಸುಖವಾಗಿ ಇರಲಾರದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಹಾಗಾಗಿ ಆಕೆ ತನ್ನ ಪ್ರಾಣರಕ್ಷಣೆಗಾಗಿ ಈ ಕೊಲೆ ಮಾಡಿದ್ದಾಳೆ ಎಂದು ಕ್ರಿಸ್ಟಿನಾ ಪರ ವಕೀಲರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.