ಮಣ್ಣಿನಲ್ಲಿ ಸ್ನಾನ ಮಾಡಿದ ನಟಿ ಊರ್ವಶಿ ರೌಟೆಲ್ಲಾ!
Tuesday, June 15, 2021
ಮುಂಬೈ: ಮಣ್ಣಿನಲ್ಲಿ ಸ್ನಾನವೆಂದರೆ ಎಲ್ಲರಿಗೂ ಸ್ವಲ್ಪ ಕನ್‌ಫ್ಯೂಷನ್ ಆಗಬಹುದು. ಆಯುರ್ವೇದವು ಮಣ್ಣನ್ನು ಮೈ ಪೂರ್ತಿ ಲೇಪನ ಮಾಡಿ ಸ್ವಲ್ಪಹೊತ್ತು ಬಿಟ್ಟು ಸ್ನಾನ ಮಾಡಿದಲ್ಲಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದೀಗ ಐರಾವತ ಚಿತ್ರದ ನಟಿ ಊರ್ವಶಿ ರೌಟೆಲ್ಲಾ ಮಣ್ಣಿನಿಂದ ಸ್ನಾನ ಮಾಡಿರುವ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.
ನಟಿ ಊರ್ವಶಿ ರೌಟೆಲ್ಲಾ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಮಣ್ಣಿನ ಸ್ನಾನದ ಫೋಟೋವನ್ನು ಅಪ್ಲೋಡ್ ಮಾಡಿ 'ಮಣ್ಣಿನ ಸ್ನಾನದಿಂದ ದೇಹದಲ್ಲಿನ ಕಲ್ಮಶಗಳೂ ನಾಶವಾಗುತ್ತವೆ. ಚರ್ಮವನ್ನು ಮೃದುಗೊಳ್ಳುತ್ತದೆ, ರಕ್ತ ಸಂಚಾರ ಸುಧಾರಿಸುತ್ತದೆ ಮತ್ತು ನೋವು ನಿವಾರಕವಾಗಿ ಇದು ಕೆಲಸ ಮಾಡುತ್ತದೆ' ಎಂದು ಬರೆದುಕೊಂಡಿದ್ದಾರೆ.
ನಟಿಮಣಿಯರು ಚರ್ಮದ ಆರೋಗ್ಯ ಕಾಪಾಡಿಕೊಳ್ಳೋಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ, ಧೂಳು, ಬಿಸಿಲಿಗೆ ದೇಹ ತಾಗದಂತೆ ನೋಡಿಕೊಳ್ಳುತ್ತಾರೆ. ಆದರೆ, ಊವರ್ಶಿ ಮಣ್ಣಿನಲ್ಲೇ ಸ್ನಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಊರ್ವಶಿ ಲಾಕ್‍ಡೌನ್ ವೇಳೆ ಫಿಟ್ನೆಸ್ ಕಾಯ್ದುಕೊಳ್ಳೋಕೆ ಏನೆಲ್ಲ ಮಾಡಬೇಕು ಎನ್ನುವುದನ್ನು ಅಭಿಮಾನಿಗಳಿಗೆ ಟಿಪ್ಸ್ ನೀಡುತ್ತಿದ್ದರು.