Mangalore- ಪಾರ್ಸೆಲ್ ವಿಚಾರದಲ್ಲಿ 10 ರೂಪಾಯಿ ಕಟ್ಟಿ 1.69 ಲಕ್ಷ ರೂ ಕಳೆದುಕೊಂಡ ಕುಡ್ಲದ ವ್ಯಕ್ತಿ
Tuesday, June 15, 2021
ಮಂಗಳೂರು; ಮಂಗಳೂರಿನ ವ್ಯಕ್ತಿಯೊಬ್ಬರು ಕೊರಿಯರ್ ಪ್ರತಿನಿಧಿಯ ಹೆಸರಿನಲ್ಲಿ ಬಂದ ಪೋನ್ ಕರೆಯನ್ನು ನಂಬಿ 10 ರೂ ಕಟ್ಟಲು ಹೋಗಿ ರೂ 1.69 ಲಕ್ಷ ರೂ ಕಳೆದುಕೊಂಡ ಘಟನೆ ನಡೆದಿದೆ.
ಮಂಗಳೂರಿನ ವ್ಯಕ್ತಿಯೊಬ್ಬರಿಗೆ ನಿನ್ನೆ ( ಜೂ.14 ) ರಂದು 9339431456 ನಂಬರ್ ನಿಂದ ಕರೆ ಬಂದಿತ್ತು. ಆ ವ್ಯಕ್ತಿ ತಾನು ಡಿಟಿಡಿಸಿ ಕೊರಿಯರ್ ನಿಂದ ಮಾತಾಡುವುದಾಗಿ ತಿಳಿಸಿದ್ದ. ಮಂಗಳೂರಿನ ವ್ಯಕ್ತಿ ಕಳುಹಿಸಿದ ಪಾರ್ಸೆಲ್ ನಲ್ಲಿ ಏರಿಯಾ ಪಿನ್ ತಪ್ಪಾಗಿ ನಮೂದು ಆಗಿದೆ ಎಂದು ತಿಳಿಸಿದ್ದ. ಆ ಪಾರ್ಸೆಲನ್ನು ಸಂಬಂಧಪಟ್ಟವರಿಗೆ ಡೆಲಿವರಿ ಮಾಡಬೇಕಾದರೆ 10 ರೂ ಪಾವತಿಸುವಂತೆ ಸೂಚಿಸಿ ಲಿಂಕ್ ವೊಂದನ್ನು ಕಳುಹಿಸಿ ಅದರ ಮೂಲಕ ಹಣ ಪಾವತಿಸುವಂತೆ ಹೇಳಿದ್ದ. ಅದರಂತೆ ಮಂಗಳೂರಿನ ವ್ಯಕ್ತಿ ಆತ ಕೊಟ್ಟ ಲಿಂಕ್ ಮೂಲಕ ಹಣ ಯುಪಿಐನಿಂದ 10 ರೂ ಹಣ ಪಾವತಿ ಮಾಡಿದ್ದರು.
ಆದರೆ ಇಂದು ಮಂಗಳೂರಿನ ವ್ಯಕ್ತಿ ಯ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಕೆನರ, ಎಸ್ ಬಿ ಐ, ಕೋಟಾಕ್ ಮಹೀಂದ್ರಾ ಬ್ಯಾಂಕ್ ನಿಂದ 1,69,600 ರೂ ಹಂತಹಂತವಾಗಿ ವರ್ಗಾವಣೆಯಾಗಿದೆ. ಒಟ್ಟಿನಲ್ಲಿ 10 ರೂ ಕಳುಹಿಸಲು ಹೋಗಿ ಕುಡ್ಲದ ವ್ಯಕ್ತಿ 1.69 ಲಕ್ಷ ರೂ ಕಳೆದುಕೊಂಡಿದ್ದಾರೆ