-->

ಮದುವೆಯಾದ ಮೂರೇ ವಾರಕ್ಕೆ ಪತ್ನಿ  ನಾಪತ್ತೆ..ಆಕೆಯ ಫೋನ್ನಲ್ಲಿ ಇತ್ತು ಬಾಯ್ಫ್ರೆಂಡ್ ರಹಸ್ಯ..

ಮದುವೆಯಾದ ಮೂರೇ ವಾರಕ್ಕೆ ಪತ್ನಿ ನಾಪತ್ತೆ..ಆಕೆಯ ಫೋನ್ನಲ್ಲಿ ಇತ್ತು ಬಾಯ್ಫ್ರೆಂಡ್ ರಹಸ್ಯ..

 ನಲ್ಲಕುಂಟ: ಮದುವೆಯಾದ ಮೂರೇ ವಾರದಲ್ಲಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಹೈದರಾಬಾದ್​ನ ನಲ್ಲಕುಂಟದಲ್ಲಿ ನಡೆದಿದೆ.

​ ಮೇ 30ರಂದು ಅದಿಕ್ಮೆಟ್​ ಬಾಲಾಜಿನಗರದ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಸಾಯಿಕುಮಾರ್,  ನಾಗ್ರಾಣಿ  (20) ಎಂಬಾಕೆಯನ್ನು ಮದುವೆಯಾಗಿದ್ದಾನೆ. ಮಂಗಳವಾರ ಬೆಳಗ್ಗೆ ಎಂದಿನಂತೆ ಸಾಯಿಕುಮಾರ್​ ಕೆಲಸಕ್ಕೆಂದು ಹೋದಾಗ  ನಾಗ್ರಾಣಿ,ಯಾರಿಗೂ ಹೇಳದೆ ಬಟ್ಟೆ, ಚಿನ್ನಾಭರಣದೊಂದಿಗೆ ಮಧ್ಯಾಹ್ನ ನಾಪತ್ತೆಯಾಗಿದ್ದಾಳೆ. ಇದನ್ನು ನೋಡಿದ  ಸ್ಥಳೀಯರೊಬ್ಬರು ಸಾಯಿಕುಮಾರ್​ಗೆ ಫೋನ್​ ಮೂಲಕ ಮಾಹಿತಿ ನೀಡಿದ್ದಾರೆ.

 ತಕ್ಷಣ ಆತ ಮನೆಗೆ ಬಂದು ನೋಡಿದಾಗ ಆಕೆಯ ಫೋನ್​ ಅಲ್ಲಿಯೇ ಬಿದ್ದಿತ್ತು. ಸ್ವಿಚ್​ ಆಫ್​ ಆಗಿದ್ದ ಫೋನ್​ ಅನ್ನು ಆನ್​ ಮಾಡಿದಾಗ ಆತನಿಗೆ ಶಾಕ್​ ಆಗಿದೆ. ನಾಗ್ರಾಣಿಗೆ ಆಕೆ ಬಾಯ್​ಫ್ರೆಂಡ್​ ಮಾಡಿದ್ದ ಮಸೇಜ್​ಗಳು ಫೋನ್​ನಲ್ಲಿತ್ತು. ಸಾಯಿಕುಮಾರ್​ ತಕ್ಷಣ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಮದುವೆಗೂ ಮುನ್ನ ಪರಿಚಯವಿದ್ದ ಯುವಕನೊಂದಿಗೆ ನಾಗ್ರಾಣಿ ಮನೆಬಿಟ್ಟು ಹೋಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99