
Mangalore- ಆಫ್ರಿಕನ್ ಪ್ರಜೆಯ ಡೀಲಿಂಗ್ - ಮಂಗಳೂರಿಗೆ ಬಂದಿದ್ದ ಮೂವರು ಡ್ರಗ್ಸ್ ಪೆಡ್ಲರ್ ವಶಕ್ಕೆ ( VIDEO)
Friday, June 4, 2021
ಮಂಗಳೂರು ; ಮಂಗಳೂರಿನಲ್ಲಿ ಡ್ರಗ್ಸ್ ಪೆಡ್ಲಿಂಗ್ ನಿರಂತರವಾಗಿ ನಡೆಯುತ್ತಿದ್ದು ಪೊಲೀಸರು ಎಷ್ಟು ನಿಗಾವಹಿಸಿದರೂ ಪೆಡ್ಲರ್ಸ್ ಕಣ್ಣಾಮುಚ್ಚಾಲೆಯಾಡುತ್ತಲೆ ಇದ್ದಾರೆ.
ಬೆಂಗಳೂರಿನಿಂದ ದೊಡ್ಡ ಮಟ್ಟದ ನಿಷೇಧಿತ ಡ್ರಗ್ಸ್ ಗಳು ಮಂಗಳೂರು ತಲುಪುತ್ತಲೆ ಇದೆ. ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಆಫ್ರೀಕನ್ ಪ್ರಜೆ ಮಂಗಳೂರಿಗೆ ಕಳುಹಿಸಿದ ಡ್ರಗ್ಸ್ ಪೊಲೀಸರ ವಶವಾಗಿದೆ.
ಕೇರಳದ ಕಾಸರಗೋಡು ಮೂಲದ ಮೂವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಿದ್ಯಾರ್ಥಿಯಾಗಿರುವ ಮಹಮ್ಮದ್ ಮನಾಫ್, ಸ್ಪೋರ್ಟ್ ಶಾಪ್ ನಲ್ಲಿ ಕೆಲಸ ಮಾಡುವ ಮಹಮ್ಮದ್ ಮಝಾಂಬಿಲ್, ಹೋಟೆಲ್ ನಲ್ಲಿ ಕೆಲಸ ಮಾಡುವ ಅಹಮದ್ ಮಸೂಕ್ ಬೆಂಗಳೂರಿನಲ್ಲಿ ಆಫ್ರಿಕನ್ ಪ್ರಜೆಯಿಂದ ಎಂಡಿಎಂಎ ಡ್ರಗ್ಸ್ ಖರೀದಿಸಿ ಮಾರಾಟಕ್ಕೆ ಮಂಗಳೂರಿಗೆ ತಂದಿದ್ದರು.
ಮಂಗಳೂರಿನ ಕೋಣಾಜೆ ಯಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಕಾರಿನಲ್ಲಿ ಎಂಡಿಎಂಎ ಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇವರ ಕಾರಿನಲ್ಲಿದ್ದ 170 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇದನ್ನು ಆರೋಪಿಗಳು ಗ್ರಾಂಗೆ 6 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರಂತೆ. ಇವರಿಂದ ಸುಮಾರು 10 ಲಕ್ಷ ರೂಪಾಯಿ ಎಂ ಡಿ ಎಂ ಎ, 5 ಲಕ್ಷ ಮೌಲ್ಯದ ಕಾರು , 4 ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಎಂಡಿಎಂ ಸಪ್ಲೈ ಮಾಡಿದ ಆಫ್ರಿಕನ್ ಪ್ರಜೆ ಮತ್ತು ಖರೀದಿಸಿದ ಗ್ರಾಹಕರ ಶೋಧ ಕಾರ್ಯ ಪೊಲೀಸರು ಮಾಡುತ್ತಿದ್ದಾರೆ.