Mangalore; ಡ್ರಗ್ಸ್ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಸಿಕ್ಕಿದ್ದು ನೈಜಿರಿಯ ಪ್ರಜೆ... ಜೊತೆಗೆ...
Monday, June 21, 2021
ಮಂಗಳೂರು :ಎರಡು ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಇದೀಗ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಡ್ರಗ್ಸ್ ಜಾಲದ ಬೆನ್ನು ಹತ್ತಿದ ಪೊಲೀಸರು ನೈಜೀರಿಯಾ ಪ್ರಜೆ ಮತ್ತು ಕೇರಳದ ವ್ಯಕ್ತಿಯನ್ನು ಬಂಧಿಸಿದ್ದಾರೆ. ನೈಜೀರಿಯಾ ದೇಶದ ಪ್ರಜೆ ಸ್ಟ್ಯಾನ್ಲಿ ಚಿಮ ಮತ್ತು ಕೇರಳದ ಉಪ್ಪಳದ ಮಹಮ್ಮದ್ ರಮೀಝ್ ಎಂಬವರು ಬಂಧಿತ ಆರೋಪಿಗಳು. ಇವರು ಇತ್ತೀಚೆಗೆ ಕೊಣಾಜೆ ಠಾಣೆ ಪೊಲೀಸರು ಪತ್ತೆ ಹಚ್ಚಿದ 2 ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ.ಈ ಮೊದಲು ಈ ಎರಡು ಪ್ರಕರಣದಲ್ಲಿ 5 ಮಂದಿಯನ್ನು ಬಂಧಿಸಿ 170 ಗ್ರಾಂ ಮತ್ತು 65 ಗ್ರಾಂ ತೂಕದ ಎಂಡಿಎಂಎಗಳನ್ನು ವಶಪಡಿಸಿಕೊಳ್ಳಲಾಗಿತ್ತು.