
Mangalore; ಶ್ರೀಲಂಕದ 38 ಮಂದಿ ಬಳಿಕ ನಗರದಲ್ಲಿ ಅನಧಿಕೃತ ವಾಸವಿದ್ದ ಓಮನ್ ಪ್ರಜೆ ಬಂಧನ- ಈತನ ಕಥೆಯೆ ಬೇರೆ - (VIDEO)
ಮಂಗಳೂರು; ಎರಡು ದಿನಗಳ ಹಿಂದೆ ಮಂಗಳೂರಿನಲ್ಲಿ ಅನಧಿಕೃತ ವಾಸವಿದ್ದ ಶ್ರೀಲಂಕಾದ 38 ಮಂದಿಯನ್ನು ಬಂಧಿಸಿದ್ದ ಮಂಗಳೂರು ಪೊಲೀಸರು ಇಂದು ಓಮನ್ ದೇಶದ ಪ್ರಜೆಯನ್ನು ಬಂಧಿಸಿದ್ದಾರೆ.
ಓಮನ್ ದೇಶದ ಅಹಮದ್ ಮುಹಮದ್ ಮೂಸಬ್ಬ ಅಲ್ ಮಹಮದಿ ಬಂಧಿತ ಆರೋಪಿ. ಈತ ಆರು ತಿಂಗಳ ಹಿಂದೆ ಟೂರಿಸ್ಟ್ ವೀಸಾದಲ್ಲಿ ಗೋವಕ್ಕೆ ಬಂದಿದ್ದ.ಬಳಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಆದಾದ ಬಳಿಕ ಈತ ಗೋಲ್ಡನ್ ಪ್ಲಾಜ ಹೋಟೆಲ್ ನಲ್ಲಿ ವಾಸ್ತವ್ಯವಿದ್ದ. ಈತನನ್ನು ಮಂಗಳೂರು ಪೊಲೀಸರು ಇಂದು ಬಂಧಿಸಿದ್ದಾರೆ.
ಈತನ ಬಂಧನದ ವೇಳೆ ಹಿಮಾಚಲ ಪ್ರದೇಶದ ರಾಮ್ ಎಂಬವನು ಜೊತೆಗಿದ್ದ. ಬಂಧಿಸುವ ವೇಳೆ ಇವರಿಬ್ಬರ ಬಳಿ 51 ಗ್ರಾಂ ಗಾಂಜಾ, 2 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಇವರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ಓಮನ್ ಪ್ರಜೆಯ ಪಾಸ್ ಪೋರ್ಟ್ ಮೇ 31 ಕ್ಕೆ ಮುಗಿದಿದ್ದು ಪಾಸ್ ಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.