Mangalore- ಮನೆಯೊಳಗೆ 3 ದಿನ ಠಿಕಾಣಿ ಹೂಡಿದ ಕಾಳಿಂಗ ( video)
Tuesday, June 1, 2021
ಮಂಗಳೂರು: ಮೂರು ದಿನಗಳಿಂದ ಮನೆಯೊಂದರಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಅಳದಂಗಡಿ ಸಮೀಪದ ನಾವರ ಗ್ರಾಮದ ಕೋಡೆಲ್ ಎಂಬಲ್ಲಿ ಹಳೆ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಈ ಮನೆಯಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಅಡಗಿ ಕುಳಿತಿತ್ತು.
ಧರ್ಣಪ್ಪ ಮಲೆಕುಡಿಯ ಅವರ ಹಳೆಯದಾದ ಮನೆಯಲ್ಲಿ ಮಳೆಗಾಲಕ್ಕೆ ಸಂಗ್ರಹಿಸಿಡಲಾಗಿದ್ದ ಕಟ್ಟಿಗೆ ರಾಶಿಯಲ್ಲಿ ಕಳೆದ ಮೂರು ದಿನಗಳಿಂದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಅಡಗಿತ್ತು. ಮನೆಯವರು ಇದು ಹೋಗಬಹುದು ಎಂದು ಮೂರು ದಿನದಿಂದ ಕಾದರೂ ಹೋಗಿರಲಿಲ್ಲ. ಅದು ಹೋಗದ ಕಾರಣ ಸ್ನೇಕ್ ಅಶೋಕ್ ಲಾಯಿಲ ಅವರ ಗಮನಕ್ಕೆ ಇದನ್ನು ತರಲಾಯಿತು. ಸ್ನೇಕ್ ಅಶೋಕ್ ಅವರು ಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.