Mangalore- ರಕ್ತದೊತ್ತಡ ಕುಸಿತವಾಗಿ 21 ವರ್ಷದ ವಿದ್ಯಾರ್ಥಿನಿ ಸಾವು!
Tuesday, June 1, 2021
ಮಂಗಳೂರು; ದಿಢೀರ್ ರಕ್ತದೊತ್ತಡ ಕುಸಿತಕ್ಕೊಳಗಾಗಿ ಮಂಗಳೂರು ಮೂಲದ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಕೂಜುಗೋಡು ಕಟ್ಟೆಮನೆಯ ಪ್ರತೀಕ್ಷಾ ರಕ್ತದೊತ್ತಡ ಕುಸಿತದಿಂದ ಬೆಂಗಳೂರಿನಲ್ಲಿ ಸಾವಿಗೀಡಾಗಿದ್ದಾರೆ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ದಿನೇಶ್ ಕೂಜುಗೋಡು ಕಟ್ಟೆಮನೆಯವರ ಎರಡನೇ ಪುತ್ರಿಯಾಗಿರುವ ಪ್ರತೀಕ್ಷಾ (21 ವರ್ಷ) ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದರು.
ಬೆಂಗಳೂರಿನ ಮನೆಗೆ ಹೋಗಿದ್ದ ಅವರಿಗೆ ಆದಿತ್ಯವಾರ ರಾತ್ರಿ ದಿಢೀರ್ ರಕ್ತದೊತ್ತಡ ಕುಸಿತ ವಾಗಿತ್ತು. ಕೂಡಲೆ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.