Mangalore-ಡೆಂಗ್ಯು ಎಚ್ಚರ; ಸುಳ್ಯದಲ್ಲಿ 21 ವರ್ಷದ ಯುವಕ ಸಾವು!
Sunday, June 13, 2021
ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಂತರ ಭಾಗದಲ್ಲಿ ಅಲ್ಲಲ್ಲಿ ಡೆಂಗ್ಯು ಕಾಣಿಸಿಕೊಳ್ಳುತ್ತಿದ್ದು ಇಂದು ಸುಳ್ಯದ 21 ವರ್ಷದ ಯುವಕ ಸಾವನ್ನಪ್ಪಿದ್ದಾನೆ.
ಸುಳ್ಯ ತಾಲೂಕಿನ ಶಾಂತಿನಗರ ನಿವಾಸಿ ಪ್ರಮೋದ್ (21) ಸಾವನ್ನಪ್ಪಿದವರು. ಇವರು ಕೆಇಬಿ ಸಿಬ್ಬಂದಿ ನಾಗೇಶ ಎಂಬವರ ಪುತ್ರರಾಗಿದ್ದಾರೆ.ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇವರಿಗೆ ಕಳೆದ 10 ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪ್ರಮೋದ್ ಮೃತಪಟ್ಟಿದ್ದಾರೆ .