ಇಲ್ಲಿ ಮದುವೆಯಾದ ನವದಂಪತಿಗಳು ಮಾಡುವ ಮೊದಲ ಕೆಲಸ ಏನು ಗೊತ್ತಾ?
Monday, June 14, 2021
ಕೌಶಾಂಬಿ : ಅದೆಷ್ಟೋ ಜನ ಮರ ಗಿಡಗಳನ್ನು ಕಡಿದು ಪರಿಸರ ನಾಶಕ್ಕೆ ಕಾರಣವಾಗುತ್ತಿದ್ದಾರೆ ಈ ಹಳ್ಳಿಯಲ್ಲಿ ಮಾತ್ರ ಮದುವೆಯಾದ ಪ್ರತಿಯೊಬ್ಬ ದಂಪತಿಯು ಗಿಡ ನೆಡುವುದರ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಮೂರತ್‌ಗಂಜ್ ಡೆವಲಪ್‌ಮೆಂಟ್ ಬ್ಲಾಕ್‌ನ ಅಮ್ನಿಲೋಕಿಪುರ ಗ್ರಾಮದ ನಿವಾಸಿಗಳು, ಹೊಸದಾಗಿ ವಿವಾಹವಾದ ಪ್ರತಿ ದಂಪತಿಗಳು ತಮ್ಮ ಮನೆ ಪ್ರವೇಶಿಸುವ ಮುನ್ನ ಕೈದೋಟ ಅಥವಾ ಹೊಲದಲ್ಲಿ ಒಂದು ಸಸಿ ನೆಡಬೇಕು.ಇಲ್ಲಿ ಮದುವೆಯಾದ ಪ್ರತಿಯೊಬ್ಬ ದಂಪತಿಯು ಗಿಡ ನೆಡುವುದು ಕಡ್ಡಾಯ.ಅದನ್ನು ತಮ್ಮ ಮೊದಲ ಮಗುವಿನ ರೀತಿ ಪೋಷಿಸುತ್ತೇವೆ ಎಂದು ಪ್ರತಿಜ್ಞೆ ಮಾಡುಬೇಕಿದೆ.
ಅತುಲ್ ಮತ್ತು ಸಂಧ್ಯಾ ದಂಪತಿ ಇಂದು ಅರಳಿ ಸಸಿ ನೆಡುವ ಮೂಲಕ ಈ ವಿಭಿನ್ನ ಕಾರ್ಯಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸ್ವತಂತ್ಯ ಸಿಂಗ್ರಿಂದ ಈ ವಿನೂತನ ಅಭಿಯಾನಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.,