ಕ್ರಿಕೆಟಿಗ ಇಶಾನ್ ಕಿಶಾನ್ - ಅದಿತಿ ಹುಂಡಿಯಾ ಸಂಬಂಧ ಹಳಸಿದೆಯೇ?, ಬ್ರೇಕ್ ಅಪ್ ಮಾಡಿಕೊಂಡರೇ?
Monday, June 7, 2021
ಮುಂಬೈ: ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿ ಸಾಕಷ್ಟು ಗಮನಸೆಳೆದಿರುವ ಇಶಾನ್ ಕಿಶನ್ ಹಾಗೂ ಅವರ ಗೆಳತಿ ಅದಿತಿ ಹುಂಡಿಯಾ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇವರಿಬ್ಬರ ಡೇಟಿಂಗ್ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಇದೀಗ ಗೆಳತಿ ಹುಂಡಿಯಾ ಅವರೊಂದಿಗೆ ಇಶಾನ್ ಕಿಶನ್ ಬ್ರೇಕ್ ಅಪ್ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದ 22 ವರ್ಷದ ಇಶಾನ್ ಕಿಶನ್ ಜುಲೈನಲ್ಲಿ ಭಾರತ ತಂಡದ ಶ್ರೀಲಂಕಾ ಪ್ರವಾಸಕ್ಕೂ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅವರ ಗರ್ಲ್ಫ್ರೆಂಡ್ ಅದಿತಿ ಹುಂಡಿಯಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿರುವ ಪೋಸ್ಟ್ ಅವರಿಬ್ಬರ ಬ್ರೇಕ್ಅಪ್ ಅನುಮಾನ ಹುಟ್ಟಿಸಿದೆ.
ಎಲ್ಲಾ ಸಂಬಂಧಗಳೂ ಮದುವೆಯ ತನಕ ಹೋಗುವುದಿಲ್ಲ. ಕೆಲವೊಂದು ನಿಮಗೆ ಹೊಸ ರೆಸ್ಟೋರೆಂಟ್ಗಳ ಪರಿಚಯವನ್ನಷ್ಟೇ ಮಾಡಿಸುತ್ತವೆ ಎಂದು ಅದಿತಿ ಹುಂಡಿಯಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಇದು ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿದ್ದು, ಇಶಾನ್ ಕಿಶನ್ ಮತ್ತು ಅದಿತಿ ಹುಂಡಿಯಾ ಪ್ರೀತಿಯೂ ಮದುವೆಯ ತನಕ ಹೋಗುವುದಿಲ್ಲವೇ ಎಂಬ ಅನುಮಾನ ಮೂಡುವಂತೆ ಮಾಡಿದೆ.
ಜೈಪುರ ಮೂಲದ ಅದಿತಿ ಹುಂಡಿಯಾ ರೂಪದಶಿರ್ಯಾಗಿ ಈಗಾಗಲೆ ಸಾಕಷ್ಟು ಹೆಸರು ಮಾಡಿದ್ದು, ರಾಜಸ್ಥಾನದ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನೂ ಜಯಿಸಿದ್ದಾರೆ. 2016ರ 19 ವಯೋಮಿತಿ ವಿಶ್ವಕಪ್ನಲ್ಲಿ ಭಾರತ ತಂಡದ ನಾಯಕರಾಗಿದ್ದ ಇಶಾನ್ ಕಿಶನ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚಿನ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.