ರಿವಾಲ್ವರ್ ನಂದಿಗೆ ಆಟವಾಡುತ್ತಾ ತನ್ನ ತೊಡೆಗೆ ಗುಂಡು ಹಾರಿಸಿಕೊಂಡ ಬಾಲಕ!
Wednesday, June 16, 2021
ವಿಜಯಪುರ: ಬಾಲಕನೊಬ್ಬ ರಿವಾಲ್ವರ್ ನಂದಿಗೆ ಆಟವಾಡುತ್ತ ತನ್ನ ತೊಡೆಗೆ ಗುಂಡು ಹಾರಿಸಿಕೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಡಚಣ ಪಟ್ಟಣದ ಮರಡಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರ ಮಡಿವಾಳರ, ಪಿಎಸ್‌ಐ ಸತಿಗೌಡರ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಭಿಷೇಕ ಸಿದ್ದಾರೂಢ ಗೋಟ್ಯಾಳ (4) ಎಂಬವ ಗಾಯಗೊಂಡ ಬಾಲಕ. ಈತನು ಮನೆಯ ತಿಜೋರಿಯಲ್ಲಿ ಲೋಡ್ ಮಾಡಿ ಇಟ್ಟಿದ್ದ, ರಿವಾಲ್ವಾರ್ ಅನ್ನು ತೆಗೆದುಕೊಂಡು ಆಟವಾಡುತಿದ್ದ ವೇಳೆ, ಗುಂಡು ತೊಡೆಗೆ ಹಾರಿದ್ದು, ತೀವ್ರ ಗಾಯಗೊಂಡ ಹಿನ್ನೆಲೆ, ಚಿಕಿತ್ಸೆಗಾಗಿ ಬಾಲಕನನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರ ಮಡಿವಾಳರ, ಪಿಎಸ್‌ಐ ಸತಿಗೌಡರ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.