
ವಿಕ್ಕಿ - ಕತ್ರಿನಾ ಡೇಟಿಂಗ್ ವಿಚಾರ: ಹರ್ಷ ಹೇಳಿಕೆಗೆ ಕೈಫ್ ಅಸಮಾಧಾನ
ಇತ್ತೀಚಿನ ಸಂದರ್ಶನವೊಂದರಲ್ಲಿ ಹರ್ಷ ಅವರು "ವಿಕಿ ಮತ್ತು ಕತ್ರಿನಾ ಒಟ್ಟಿಗೆ ಇದ್ದಾರೆ, ಅದು ನಿಜ. ಇದನ್ನು ಹೇಳಿದ್ದಕ್ಕಾಗಿ ನಾನು ತೊಂದರೆಗೆ ಸಿಲುಕಲಿದ್ದೇನೆ? ನನಗೆ ಗೊತ್ತಿಲ್ಲ, ಅವರು ಸಾಕಷ್ಟು ಅದರ ಬಗ್ಗೆ ಮುಕ್ತವಾಗಿದ್ದಾರೆ ಎಂದು ಭಾವಿಸುತ್ತೇನೆ" ಎಂದು ಹೇಳಿಕೆ ನೀಡಿದ್ದರು.ಹರ್ಷ ಹೇಳಿಕೆಯಿಂದ ಅಸಮಾಧಾನಗೊಂಡಿದ್ದೇನೆ ಎಂದು ಸ್ವತಃ ಕತ್ರಿನಾ ಆಪ್ತರ ಜೊತೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿದೆ.
“ಹರ್ಷವರ್ಧನ್ ಶೋವೊಂದರಲ್ಲಿ ಅವರ ಪ್ರೀತಿಯ ಜೀವನದ ಬಗ್ಗೆ ಚರ್ಚಿಸುವ ಯಾವುದೇ ಅಧಿಕಾರ ಹೊಂದಿರಲಿಲ್ಲ. ಕತ್ರಿನಾ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ಮೊದಲು ಆಕೆಯನ್ನು ಕೇಳಬೇಕಿತ್ತು. ಕತ್ರಿನಾ ತನ್ನ ಪ್ರಸ್ತುತ ಸಂಬಂಧದ ಬಗ್ಗೆ ತುಂಬಾ ಜಾಗರೂಕರಾಗಿರುತ್ತಾಳೆ. ಅವಳು ಈ ಹಿಂದಿನ ಸಂಬಂಧಗಳು ಮುರಿದುಬಿದ್ದ ಬಳಿಕ ತುಂಬಾ ಕಷ್ಟ ಅನುಭವಿಸಿದ್ದಾಳೆ' ಎಂದು ಕತ್ರಿನಾ ಆಪ್ತರೊಬ್ಬರು ಹೇಳಿದ್ದಾರೆ.