ಅನಾಥ ಅಪ್ರಾಪ್ತೆಯರೊಂದಿಗೆ ವಿವಾಹ: ದೂರು ದಾಖಲು
Sunday, June 13, 2021
ದಾವಣಗೆರೆ: ಪಾಲಕರನ್ನು ಕಳೆದುಕೊಂಡ ಇಬ್ಬರು ಅಪ್ರಾಪ್ತೆಯರನ್ನು ದುರುಳರಿಬ್ಬರು ಮದುವೆಯಾಗಿರುವ ಘಟನೆ ದಾವಣಗೆರೆ ನಗರದ ಬಡಾವಣೆಯೊಂದರಲ್ಲಿ ನಡೆದಿದೆ.
2 ವರ್ಷದ ಹಿಂದೆ ಬಾಲಕಿಯರ ತಂದೆ ಮೃತಪಟ್ಟಿದ್ದು, ಐದು ತಿಂಗಳ ಹಿಂದೆ ತಾಯಿ ಕೋವಿಡ್ಗೆ ಬಲಿಯಾಗಿದ್ದಾರೆ. ತಂದೆ-ತಾಯಿ ಕಳೆದುಕೊಂಡ ನಾಲ್ವರು ಹೆಣ್ಮಕ್ಕಳು ಹಾಗೂ ಒಂದು ಗಂಡು ಮಗು ಸೇರಿ ಒಟ್ಟು ಐವರು ಜೀವನ ಸಾಗಿಸುವುದಕ್ಕೆ ಒದ್ದಾಡುತ್ತಿದ್ದರು. ಇಬ್ಬರು ದುರುಳರು ಮೂರು ತಿಂಗಳ ಹಿಂದೆ 15 ವರ್ಷ ಹಾಗೂ 13 ವರ್ಷದ ಅಪ್ರಾಪ್ತೆಯರನ್ನು ವಿವಾಹವಾಗಿದ್ದಾರೆ.
ಅಪ್ರಾಪ್ತೆಯರಿಗೆ ವಂಚಿಸಿ ಮದುವೆಯಾಗಿರುವ ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.