ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವೇ ನವವಿವಾಹಿತನ ದುರಂತ ಅಂತ್ಯ..!! ಆ ರಾತ್ರಿ ನಡೆದದ್ದೇನು..?
Tuesday, June 22, 2021
ಹೈದರಾಬಾದ್: ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವೇ ನವವಿವಾಹಿತ ವರ ದುರಂತ ಅಂತ್ಯ ಕಂಡಿದ್ದಾನೆ.
ಸೂರ್ಯ ಬಾಬು ಮೃತ ದುದೈರ್ವಿ. ಇವನ ಮದುವೆ ಭಾನುವಾರ ಸಂಜೆ ನಡೆದಿತ್ತು. ಮದ್ವೆಯಾದ ದಿನದ ರಾತ್ರಿಯೇ ಮದುಮಗ ಮನೆಯ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ಈ ಘಟನೆ ತೆಲಂಗಾಣದ ಜೋಗುಲಾಂಬ ಗಡ್ವಾಲಾ ಜಿಲ್ಲೆಯ ವದ್ದೇಪಳ್ಳಿಯಲ್ಲಿ ಸಂಭವಿಸಿದ್ದು, ಮದುಮಗ ಸತ್ತ ರಾತ್ರಿ ಮೃತನ ಕುಟುಂಬಸ್ಥರು ಮತ್ತು ವಧುವಿನ ನಡುವೆ ಗಲಾಟೆ ನಡೆದಿತ್ತು ಎಂದು ತಿಳಿದುಬಂದಿದೆ. ಮಾಹಿತಿ ತಿಳಿದ ಪೊಲೀಸರು ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದು, ಸಾವಿನ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.