ಪತ್ನಿಯ ಜೊತೆ ಅಕ್ರಮ ಸಂಬಂಧದ ಶಂಕೆ: ಹರಿಯಿತು ನೆತ್ತರು..!!
Sunday, June 20, 2021
ಮೈಸೂರು: ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆತನನ್ನು ಚಾಕುವಿನಿಂದ ಇರಿದಿರುವ ಘಟನೆ ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದಲ್ಲಿ ನಡೆದಿದೆ.
ವಾಟಾಳು ಗ್ರಾಮದ ನಿವಾಸಿ ಕುಮಾರ್ ಆರೋಪಿ. ಅದೇ ಗ್ರಾಮದ ಸಿಪಾಯಿ ಗಾಯಗೊಂಡವರು. ಕುಮಾರ್ ಪತ್ನಿಯ ಜತೆ ಸಿಪಾಯಿ ಅಕ್ರಮ ಸಂಬಂಧ ಹೊಂದಿದ್ದಾನೆಂಬ ಮಾತು ಊರಿನಲ್ಲಿ ಕೇಳಿಬಂದಿತ್ತು. ಇದರಿಂದ ಕೋಪಗೊಂಡ ಕುಮಾರ್, ಸಿಪಾಯಿ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಸಿಪಾಯಿಯನ್ನು ಸ್ಥಳೀಯರು ತಕ್ಷಣ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಿಪಾಯಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಘಟನೆಯ ಬಳಿಕ ಕುಮಾರ್ ಪರಾರಿಯಾಗಿದ್ದು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.