-->

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ವಾರಂತ್ಯ ಕರ್ಫ್ಯೂ ಇದೆಯ? - ಗೊಂದಲಗಳಿಗೆ ಇಲ್ಲಿದೆ ಮಾಹಿತಿ

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ವಾರಂತ್ಯ ಕರ್ಫ್ಯೂ ಇದೆಯ? - ಗೊಂದಲಗಳಿಗೆ ಇಲ್ಲಿದೆ ಮಾಹಿತಿ


ಮಂಗಳೂರು; ಕೊರೊನಾ ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಹೊಸತೊಂದು ಸಂಶಯ ಶುರುವಾಗಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಂತ್ಯ ಕರ್ಫ್ಯೂ ಇರುತ್ತಾ , ಇಲ್ವ ಎಂಬ ಪ್ರಶ್ನೆ ಜನರಲ್ಲಿ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

ಈ ವಾರ ವಾರಂತ್ಯ ಕರ್ಫ್ಯೂ ಇರುವುದಿಲ್ಲ! 

ದಕ್ಷಿಣ ಕನ್ನಡ ಜಿಲ್ಲೆ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಕಳೆದ ವಾರ ಜಿಲ್ಲಾಡಳಿತ ಜಾರಿಗೊಳಿಸಿತ್ತು. ಅದರಂತೆ  ಶನಿವಾರ ಮತ್ತು ಆದಿತ್ಯವಾರ ವಾರಂತ್ಯ ಕರ್ಫ್ಯೂ ಎಂದು ಘೋಷಿಸಿ ಅಂದು ಮೆಡಿಕಲ್ , ಆಸ್ಪತ್ರೆ ಮತ್ತು ಹಾಲು ಹೊರತುಪಡಿಸಿ ಇತರ ಸೇವೆಗೆ ನಿರ್ಬಂಧ ಮಾಡಲಾಗಿತ್ತು. ಆದರೆ ಸೋಮವಾರದಿಂದ ( may10 ) ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಆ ನಿಯಮದ ಪ್ರಕಾರ ವಾರಂತ್ಯ ಕರ್ಫ್ಯೂ ಇರುವುದಿಲ್ಲ.  ಜಿಲ್ಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ನಿಯಮ ಇರುವುದರಿಂದ  ಈ ವಾರ( ಮೇ 15 ಮತ್ತು 16) ಶನಿವಾರ ಮತ್ತು ಆದಿತ್ಯವಾರ ಜಿಲ್ಲೆಯಲ್ಲಿ ವಾರಂತ್ಯ ಕರ್ಪ್ಯೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿ ಜಿಲ್ಲಾಡಳಿತ ಪ್ರಕಟನೆ ನೀಡಿದ್ದು ಅದರ ಪ್ರತಿ ಇಲ್ಲಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99