
ಗೆಳೆಯನನ್ನು ಕಟ್ಟಿ ಹಾಕಿ 21 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ- ಆ ಪೋಟೋ ತೋರಿಸಿ ಮತ್ತೆ ಆಶೆ ತೀರಿಸು ಎಂದು ಬೆದರಿಕೆ
Friday, May 14, 2021
ವಿಜಯವಾಡ: ಗೆಳೆಯನೊಂದಿಗೆ ಬೀಚ್ ನಲ್ಲಿ ತಿರುಗಾಡುತ್ತಿದ್ದ ವೇಳೆ ಮೂವರು ಕಾಮುಕರು ಯುವತಿಯನ್ನು ಅತ್ಯಾಚಾರ ಮಾಡಿದ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿಯಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ಗೆಳೆಯನ ಜತೆಯಲ್ಲಿ ಬೀಚ್ಗೆ ತೆರಳಿದ ಯುವತಿಯ ಮೇಲೆ ಮೂವರು ಪಾನಮತ್ತ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಲಗುಪ್ತಮ್ ವಲಯದ 21 ವರ್ಷದ ಯುವತಿ ಅತ್ಯಾಚಾರಕ್ಕೊಳಗಾದವಳು. ಈಕೆ ಹದಿನೈದು ದಿನಗಳ ಹಿಂದೆ ಸಂಬಂಧಿಕರ ಮನೆಗೆ ಬಂದಿದ್ದು ಇದರ ನಡುವೆ ಈಕೆ ತನ್ನ ಸ್ನೇಹಿತನ ಜತೆಯಲ್ಲಿ ಕೊಮರಗಿರಿಪಟ್ಟಣಂನ ಬೀಚ್ ಗೆ ತೆರಳಿದ್ದಾಳೆ.
ಇದೇ ವೇಳೆ ಸಿತಾರಾಮಪುರದ ಇಬ್ಬರು ಯುವಕರು ಮತ್ತು ಸತ್ಯನಾರಾಯಣಪುರದ ಓರ್ವ ಯುವಕ ಪಾನಮತ್ತ ಸ್ಥಿತಿಯಲ್ಲಿ ಇವರನ್ನು ಎದುರುಗೊಂಡಿದ್ದಾರೆ.
ಈ ಮೂವರು ಸೇರಿ ಯುವತಿಯ ಸ್ನೇಹಿತನನ್ನು ಕಟ್ಟಿಹಾಕಿ ಯುವತಿಯನ್ನು ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ ಆಕೆಯ ಫೋಟೋಗಳನ್ನು ಸಹ ಮೊಬೈಲ್ ನಲ್ಲಿ ತೆಗೆದಿದ್ದಾರೆ. ಈ ವಿಚಾರವನ್ನು ಯುವತಿಯಾಗಲಿ, ಆಕೆಯ ಸ್ನೇಹಿತರಾಗಲಿ ಯಾರಿಗೂ ತಿಳಿಸಿರಲಿಲ್ಲ.
ಈ ಘಟನೆ ನಡೆದ 10 ದಿನಗಳ ಬಳಿಕ ಒಬ್ಬ ಮತ್ತೆ ಆಕೆಯ ಮುಂದೆ ಎದುರಾಗಿ ಮತ್ತೊಮ್ಮೆ ಆಶೆ ತೀರಿಸುವಂತೆ ಕೇಳಿದ್ದು ಇಲ್ಲದಿದ್ದರೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ಈ ಬೆದರಿಕೆ ಬಂದ ಬಳಿಕ ಯುವತಿ ಬೀಚ್ ನಲ್ಲಿ ನಡೆದ ಘಟನೆಯನ್ನು ಮನೆಯವರ ಮುಂದೆ ತಿಳಿಸಿದ್ದಾಳೆ. ಬುಧವಾರ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಆರೋಪಿಗಳ ಶೋಧ ಕಾರ್ಯ ಮುಂದುವರಿಸಿದ್ದಾರೆ