VOTE ಮಾಡಿ: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದು ಸರಿಯೋ ತಪ್ಪೋ?
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಇಳಿಸಲು ಬಿಜೆಪಿ ಹೈಕಮಾಂಡ್ ಚಿಂತಿಸಿದೆ ಎಂದು ಸುದ್ದಿಯಾಗುತ್ತಾ ಇದೆ. ಈ ಕಾರಣದಿಂದಲೇ ಕೆಲವೊಂದು ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಿದೆ. ಆದರೆ ಅದು ಈವರೆಗೆ ಕೇವಲ ಸುದ್ದಿಯಾಗಿ ಮಾತ್ರ ಬಂದಿದೆ. ಇದೀಗ ಮತ್ತೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನದಿಂದ ಈ ಸಂದರ್ಭದಲ್ಲಿ ಬದಲಾವಣೆ ಮಾಡುವುದು ಸರಿಯೋ ತಪ್ಪೋ ಎಂಬುದು ಚರ್ಚೆಯಾಗುತ್ತಿದೆ. ಗಲ್ಪ್ ಕನ್ನಡಿಗ ಓದುಗರು ತಮ್ಮ ಅಭಿಪ್ರಾಯವನ್ನು ಇಲ್ಲಿ ವೋಟ್ ಮಾಡುವ ಮೂಲಕ ತಿಳಿಸಬಹುದು. ಮೇ 27 ರಾತ್ರಿವರೆಗೆ ಇದು ಲಭ್ಯವಿದ್ದು ಮೇ 28 ರಂದು ಫಲಿತಾಂಶವನ್ನು ಇಲ್ಲಿಯೆ ಪ್ರಕಟಿಸಲಾಗುವುದು
ಫಲಿತಾಂಶ:
ಸರಿ - 64 ಶೇಕಡಾ
ತಪ್ಪು - 36 ಶೇಕಡಾ