-->
ಚುನಾವಣೆ ರಿಸಲ್ಟ್- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದು ಹೀಗೆ...  video

ಚುನಾವಣೆ ರಿಸಲ್ಟ್- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದು ಹೀಗೆ... video



ಮಂಗಳೂರು:  ಪಂಚರಾಜ್ಯಗಳ ಚುನಾವಣೆ ಮತ್ತು ರಾಜ್ಯದ ಉಪಚುನಾವಣೆಯ ಫಲಿತಾಂಶ ದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು
ಕೊರೊನಾ ಹಿನ್ನೆಲೆಯಲ್ಲಿ ಎಲ್ಲೂ ವಿಜಯೋತ್ಸವ ಆಚರಿಸೋದು ಬೇಡ.‌ ಯಾವುದೇ ರೀತಿಯ ಸಂಭ್ರಮಾಚರಣೆ, ಸಭೆಗಳನ್ನು ನಡೆಸದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ‌ಆದ್ದರಿಂದ ಗೆಲುವಿನ ಸಂಭ್ರಮವನ್ನು ಮನಸ್ಸಿನಲ್ಲಿಟ್ಟುಕೊಂಡು ಆಚರಣೆ ಮಾಡಿ ಎಂದಿದ್ದಾರೆ.

ವಿಜಯೋತ್ಸವ ಬದಲಿಗೆ ಯಾರಾದರೂ ಸಂಷ್ಟದಲ್ಲಿದ್ದಲ್ಲಿರುವವರ ಸೇವೆಯನ್ನು ಮಾಡಲು ಮುಂದಾಗಿ ಎಂದ ಅವರು ಪಂಚರಾಜ್ಯ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಅಸ್ಸಾಂನಲ್ಲಿ ಎರಡನೇ ಬಾರಿ ಅಧಿಕಾರ ಉಳಿಸುವ ಪ್ರಯತ್ನವಾಗಿದ್ದರೆ, ಪುದುಚೇರಿಯಲ್ಲಿ  ಮೊದಲ ಬಾರಿಗೆ ಶೂನ್ಯದಿಂದ 11 ಸ್ಥಾನದತ್ತ ಗೆಲುವಿನ ವಿಜಯ ಸಾಧಿಸಿದೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ಚುನಾವಣಾ ಫಲಿತಾಂಶದ ಪ್ರಕಾರ ಶೇಕಡಾವಾರು ಬಿಜೆಪಿಗೆ ಅತಿಹೆಚ್ಚು ಮತಗಳು ಬರುತ್ತಿವೆ. ಬಸವಕಲ್ಯಾಣದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬೆಳಗಾವಿಯಲ್ಲಿ 50 ಪ್ರತಿಶತ ಮತ ಎಣಿಕಾ ಕಾರ್ಯ ನಡೆದಿದ್ದು, ಸಂಜೆಯ ಒಳಗೆ ಅಲ್ಲಿಯೂ ನಾವು ವಿಜಯ ಸಾಧಿಸಲಿದ್ದೇವೆ ಎಂಬ ಭರವಸೆ ಇದೆ. ಇಡೀ ದೇಶದಲ್ಲಿ ಬಿಜೆಪಿ ಅತಿಹೆಚ್ಚು ಮತವನ್ನು ಪಡೆಯುವ ಮೂಲಕ ಜನರ ಒಲವನ್ನು ಪಡೆಯುವ ಪಕ್ಷವಾಗಿ ಮೂಡಿದೆ ಎಂದರು. 

ಕೇರಳದಲ್ಲಿ ಒಂದು ಸ್ಥಾನಗಳಿದ್ದ ನಮಗೆ ಈ ಬಾರಿ ಮೂರು ಸ್ಥಾನಗಳಿಂದ ಮುಂದಕ್ಕಿದ್ದೇವೆ. ಸಂಜೆಯ ಒಳಗೆ ಫಲಿತಾಂಶ ಇನ್ನೂ ಉತ್ತಮ ರೀತಿಯಲ್ಲಿ ನಮ್ಮ ಪರವಾಗಿ ಬರಬಹುದೆಂಬ ನಿರೀಕ್ಷೆಯಿದೆ. ಕಾಂಗ್ರೆಸ್ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ, ತಮಿಳುನಾಡು, ಕೇರಳಗಳಲ್ಲಿಯೂ ಎಲ್ಲಿಯೂ ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ. ಈ ಮೂಲಕ ಜನರು ಇಡೀ ದೇಶದಲ್ಲಿ ಕಾಂಗ್ರೆಸನ್ನು ತಿರಸ್ಕಾರ ಮಾಡಿರೋದು ಸ್ಪಷ್ಟವಾಗಿದೆ . ಮಸ್ಕಿಯಲ್ಲಿ ನಮ್ಮ ನಿರೀಕ್ಷೆಯಂತೆ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಿಜೆಪಿಯನ್ನು ಪ್ರವೇಶಮಾಡಿರುವ ಪ್ರತಾಪ್ ಗೌಡರಿಗೆ ಅಲ್ಲಿ ಅಭ್ಯರ್ಥಿ ಸ್ಥಾನ ನೀಡಿದ್ದು, ಮೂರು ಅವಧಿಗೆ ಶಾಸಕರಾಗಿರುವ ಅವರೇ ಗೆಲುವು ಸಾಧಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಸೋಲನ್ನನುಭವಿಸಿದರು. ಈ ಸೋಲನ್ನು ಸ್ವೀಕಾರ ಮಾಡುತ್ತೇವೆ ಎಂದು  ಹೇಳಿದರು.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99