ಮಂಜೇಶ್ವರದಲ್ಲಿ ಮತ್ತೆ ಸೋಲುಂಡ ಬಿಜೆಪಿ: ಯುಡಿಎಫ್ ಗೆಲುವು
Sunday, May 2, 2021
ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದ ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಮಂಜೇಶ್ವರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಭಾರಿ ಪ್ರಚಾರ ನಡೆದಿತ್ತು. ಬಿಜೆಪಿ ಅಭ್ಯರ್ಥಿ ಯಾಗಿದ್ದ ಸುರೇಂದ್ರನ್ 2016 ರಲ್ಲಿ ಲೀಗ್ ಅಭ್ಯರ್ಥಿ ಅಬ್ದುಲ್ ರಝಾಕ್ ಅವರಿಂದ 87 ಮತಗಳಿಂದ ಸೋಲು ಕಂಡಿದ್ದರು. ರಝಾಕ್ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಕುಂಟಾರು ರವೀಶ್ ತಂತ್ರಿ 5 ಸಾವಿರ ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. ಈ ಬಾರಿ ಸುರೇಂದ್ರನ್ ಮತ್ತೆ ಸ್ಪರ್ಧಿಸಿ ಕುತೂಹಲ ಮೂಡಿಸಿದ್ದರು.
ಆದರೆ ಪ್ರತಿ ಸುತ್ತಿನಲ್ಲಿ ಬಿಜೆಪಿ ಮತ್ತು ಲೀಗ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದ್ದು ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಸೋಲನ್ನಪ್ಪಿದ್ದಾರೆ. ಲೀಗ್ ಅಭ್ಯರ್ಥಿ ಎ ಕೆ ಎಂ ಅಶ್ರಫ್ ಗೆಲುವು ಸಾಧಿಸಿದ್ದಾರೆ
. ರಾಜ್ಯದಲ್ಲಿ ಅಧಿಕಾರ ಪಡೆದಿರುವ ಸಿಪಿಎಂ ಮೂರನೇ ಸ್ಥಾನ ದಲ್ಲಿದೆ
ಮಂಜೇಶ್ವರ ಕ್ಷೇತ್ರ ಗೆಲ್ಲಲ್ಲು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಭಾರಿ ಪ್ಲಾನ್ ಗಳನ್ನು ಮಾಡಲಾಗಿತ್ತು. ಖುದ್ದು ಅಮಿತ್ ಶಾ ಅವರೆ ಮಂಜೇಶ್ವರ ಸ್ಥಾನ ಗೆಲ್ಲಲು ಟಾಸ್ಕ್ ನೀಡಿದ್ದರು. ಕರ್ನಾಟಕದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆದರೂ ಈ ಬಾರಿಯು ಬಿಜೆಪಿಗೆ ಸೋಲಾಗಿದೆ.