
ಅಲ್ಲಾಹನ ನಾಮದಲ್ಲಿ, ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕೇರಳದ ಶಾಸಕ - ಯಾರು ಗೊತ್ತಾ? (Video)
ತಿರುವನಂತಪುರಂ: ಕೇರಳ ನಿಯಮಸಭೆಯ ಎಲ್ಲಾ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದು, ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಎಕೆಎಂ ಅಶ್ರಫ್ ಅವರ ಪ್ರಮಾಣ ವಚನ ಕೇರಳದ ಗಮನ ಸೆಳೆಯಿತು.
ಮಂಜೇಶ್ವರದಿಂದ ಮುಸ್ಲಿಂ ಲೀಗ್ ಪಕ್ಷದಿಂದ ಆಯ್ಕೆಯಾದ ಶಾಸಕ ಎಕೆಎಂ ಅಶ್ರಫ್ ಕನ್ನಡದ ಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೂ, ಅಲ್ಲಾಹನ ನಾಮದಲ್ಲಿ ಪ್ರತಿಜ್ಞೆ ಕೈಗೊಂಡಿದ್ದಾರೆ.
ಕರ್ನಾಟಕದ ಗಡಿಪ್ರದೇಶವಾದ ಮಂಜೇಶ್ವರದಲ್ಲಿ ಕನ್ನಡದ ಪ್ರಭಾವ ತೀವ್ರವಿದ್ದೂ, ಈ ನಿಟ್ಟಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಮಾಡಿದ್ದಾರೆಂದು ಹೇಳಲಾಗುತ್ತಿದೆ.