SHOCKING NEWS; ಮಹಿಳೆಯ ಅತ್ಯಾಚಾರ ಮಾಡಿ ಬೆತ್ತಲೆ ಸ್ಥಿತಿಯಲ್ಲಿ ಕಂಬಕ್ಕೆ ನೇತು ಹಾಕಿದ ಕಾಮುಕರು
Wednesday, May 26, 2021
ಶೌಚಕ್ಕೆಂದು ಮನೆಯಿಂದ ಹೊರ ಬಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನ ಬೆತ್ತಲೆ ಸ್ಥಿತಿಯಲ್ಲೇ ಕಂಬಕ್ಕೆ ಕಟ್ಟಿ ನೇತು ಹಾಕಿದ ಹೃದಯವಿದ್ರಾವಕ ಘಟನೆ ಬಿಹಾರದ ಸಮಷ್ಟಿಪುರ ಜಿಲ್ಲೆ ವಿಭೂತಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಅತ್ಯಾಚಾರಕ್ಕೀಡಾದ ಮಹಿಳೆಯ ಮನೆಯಲ್ಲಿ ವಿವಾಹ ಸಮಾರಂಭ ಇತ್ತು. ಮನೆಯವರು ಇದರ ಸಿದ್ಧತೆಯಲ್ಲಿ ಇರುವಾಗ ಈ ಮಹಿಳೆ ಮಲವಿಸರ್ಜನೆಗೆಂದು ಮನೆಯಿಂದ ಹೊರ ಹೋಗಿದ್ದಾರೆ. ಆಗ ಅಲ್ಲಿಗೆ ಬಂದ ಕಾಮುಕರು ಮಹಿಳೆಯನ್ನು ಅತ್ಯಾಚಾರವೆಸಗಿದ್ದಾರೆ.
ಅತ್ಯಾಚಾರದ ವೇಳೆ ಪ್ರಜ್ಞೆ ತಪ್ಪಿದ ಮಹಿಳೆಯನ್ನ ಬೆತ್ತಲೆ ಮಾಡಿ ವಿದ್ಯುತ್ ಕಂಬಕ್ಕೆ ಕಟ್ಟಿ ನೇತು ಹಾಕಿದ್ದಾರೆ. ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು , ಈ ಅಮಾನವೀಯ ಘಟನೆಗೆ ಇಡೀ ಊರೇ ಬೆಚ್ಚಿಬಿದ್ದಿದೆ. ಕೂಡಲೇ ಮಹಿಳೆಯನ್ನು ಕಂಬದಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಮೈಮೇಲಿದ್ದ ಚಿನ್ನಾಭರಣವನ್ನು ಇವರು ಕದ್ದೊಯ್ದಿದ್ದಾರೆ.