ವಿಮಾನವೇರುವಾಗ ಈಕೆಗೆ ತಾನು ಗರ್ಭಿಣಿ ಎಂದೇ ಗೊತ್ತಿರಲಿಲ್ಲ- ಬಳಿಕ ಆಕಾಶದಲ್ಲಿ ನಡೆದ ಪವಾಡವೇನು ಗೊತ್ತಾ??
Tuesday, May 4, 2021
ಉತಾಹ್: ತಾನು ಗರ್ಭಿಣಿ ಎಂದು ತಿಳಿದಿರದ ಮಹಿಳೆಯೋರ್ವಳು ವಿಮಾನದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಅಮೇರಿಕಾದ ಸಾಲ್ಟ್ ಲೇಕ್ ಸಿಟಿಯಲ್ಲಿ ನಡೆದಿದೆ.
ಲಾವಿನಿಯಾ ಮೌಂಗಾ ಎಂಬ ಮಹಿಳೆ ತನ್ನ ತವರು ಉತಾಹ್‌ನಿಂದ ಹವಾಯಿಗೆ ಹೋಗಲೆಂದು ವಿಮಾನವೇರಿದ್ದಳು. ಆದರೆ ವಿಮಾನದಲ್ಲಿ ಆಕೆಗೆ ಮಾರ್ಗ ಮಧ್ಯೆಯೇ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ಹೇರಿಗೆ ವೇಳೆ ಮೌಂಗಾ ಕೇವಲ ಮೂರು ತಿಂಗಳ ಗರ್ಭಿಣಿಯಾದ್ದಳಷ್ಟೆ. ಈ ನಿಟ್ಟಿನಲ್ಲಿ ಆಕೆಗೆ ತಾನು ಗರ್ಭಿಣಿ ಎಂಬುದು ಗೊತ್ತಿರಲಿಲ್ಲ.
ಅದೃಷ್ಡಕ್ಕೆ ಅದೇ ವಿಮಾನದಲ್ಲಿ ವೈದ್ಯರು ಮತ್ತು ನರ್ಸ್ ಗಳಿದ್ದರು. ಈ ನಿಟ್ಟಿನಲ್ಲಿ ಹೆರಿಗೆ ಎಲ್ಲಾ ವೈದ್ಯಕೀಯ ನೆರವು ದೊರೆತಿದ್ದು, ಮೌಂಗಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ತಿಂಗಳು ಪೂರ್ತಿಯಾಗದ ಕಾರಣ ವೈದ್ಯಕೀಯ ನಿಗಾದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಗರ್ಭಿಣಿಯಾಗಿ ವಿಮಾನವೇರಿದ ಮಹಿಳೆ, ಮಗುವಿನೊಂದಿಗೆ ತಾಯಿಯಾಗಿ ವಿಮಾನದಿಂದ ಇಳಿದಿದ್ದಾಳೆ