ನಂದಿಗ್ರಾಮದಲ್ಲಿ ದೀದಿಗೆ ಸೋಲು: ಗೆದ್ದ ಟಿಎಂಸಿ ಶಾಸಕರ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರು
Monday, May 3, 2021
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಹುಮತ ಪಡೆದ ಟಿಎಂಸಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಮಮತಾ ಬ್ಯಾನರ್ಜಿಗೆ ಸೋಲಾದ ಹಿನ್ನೆಲೆಯಲ್ಲಿ ಗೆದ್ದ ಟಿಎಂಸಿ ಶಾಸಕರಿಗೆ ಈಗ ಎದೆಯಲ್ಲಿ ನಡುಕ ಶುರುವಾಗಿದೆ.
ಸದ್ಯ ಟಿಎಂಸಿ ಪಕ್ಷದ ಶಾಸಕಾಂಗ ನಾಯಕಿಯಾಗಿ ಮಮತಾ ಬ್ಯಾನರ್ಜಿ ಅವಿರೋಧವಾಗಿ ಆಯ್ಕೆಯಾಗಿದ್ದು, ಮೇ 5ರಂದು ಪ್ರಮಾಣ ವಚನ ಮಾಡಲಿದ್ದಾರೆ.
ಆದರೆ ಪ್ರಮಾಣ ವಚನದ 6 ತಿಂಗಳ ಒಳಗಾಗಿ ಮಮತಾ ಬ್ಯಾನರ್ಜಿ ವಿಧಾನ ಸಭೆಗೆ ಆಯ್ಕೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಮತ್ತೆ ಯಾವುದಾದರೊಂದು ಕ್ಷೇತ್ರದಿಂದ ಜನಾದೇಶ ಪಡೆಯಲಿದ್ದಾರೆ.
ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅತೀ ಸುರಕ್ಷಿತ ಕ್ಷೇತ್ರವನ್ನೇ ಅಯ್ಕೆಮಾಡಬಹುದಾಗಿದ್ದು, ಸದ್ಯ ಆಯ್ಕೆಯಾಗಿರುವ ಟಿಎಂಸಿ ಶಾಸಕರು ಯಾವುದೇ ಕ್ಷಣದಲ್ಲೂ ದೀದಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದೀತು.
ಪಕ್ಷ ಯಾರಿಂದ ರಾಜೀನಾಮೆ ಬಯಸಿದರೂ, ಮನಸ್ಸಿಲ್ಲದಿದ್ದರೂ ಈ ತ್ಯಾಗವನ್ನು ದೀದಿಗಾಗಿ ಮಾಡಬೇಕಾಗಿರುವ ಅನಿವಾರ್ಯತೆ ಟಿಎಂಸಿ ಶಾಸಕರ ಮುಂದಿದೆ.ಈ ರೀತಿಯ ತ್ಯಾಗದ ಮೂಲಕ ಮತ್ತೆ ತಮಗೆ ರಾಜ್ಯಸಭಾ ಸ್ಥಾನವೋ, ಅಥವಾ ಇತರ ಅತ್ಯುನ್ನತ ಹುದ್ದೆಯ ಆಫರ್ ಕೂಡಾ ಈ ಶಾಸಕರ ಮುಂದಿರಬಹುದು.
ಒಟ್ಟಿನಲ್ಲಿ ದೀದಿ ಮರು ಜನಾದೇಶಕ್ಕಾಗಿ ಯಾವ ಕ್ಷೇತ್ರವನ್ನು ಆಯ್ದುಕೊಳ್ಳುತ್ತಾರೆ ಎಂಬುವುದೇ ಕುತೂಹಲ ಮೂಡಿಸಿದೆ.