-->

ಪಿಣರಾಯಿಯ ಈ 'ಕಾರ್ಯ'ವನ್ನು ಅಭಿನಂದಿಸಿದ ನರೇಂದ್ರ ಮೋದಿ

ಪಿಣರಾಯಿಯ ಈ 'ಕಾರ್ಯ'ವನ್ನು ಅಭಿನಂದಿಸಿದ ನರೇಂದ್ರ ಮೋದಿ


ನವದೆಹಲಿ: ಕೇರಳ ಸರಕಾರ ಕೋವಿಡ್ ವ್ಯಾಕ್ಸಿನ್ ನ ಸಮರ್ಪಕವಾಗಿ ವೇಸ್ಟೇಜ್ ಇಲ್ಲದೇ ನಿರ್ವಹಣೆ ಮಾಡಿದ್ದು, ಈ ಕುರಿತಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದಕ್ಕೆ ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಪಿಣರಾಯಿ ಟ್ವೀಟ್‌ನಲ್ಲಿ ಏನಿತ್ತು?: ಕೇಂದ್ರ ಸರಕಾರದಿಂದ ಕೇರಳವು 73,38,806 ಡೋಸ್ ಕೋವಿಡ್ ಲಸಿಕೆಗಳನ್ನು ಸ್ವೀಕರಿಸಿತ್ತು. ಈ ಲಸಿಕೆಗಳನ್ನು ಇಟ್ಟುಕೊಂಡು ನಾವು 74, 26,164 ಜನರಿಗೆ ವ್ಯಾಕ್ಸಿನೇಷನ್‌ ಮಾಡಿದ್ದೇವೆ.
ಅದರಲ್ಲಿದ್ದ ವೇಸ್ಟೇಜ್ ಎಕ್‌ಸ್ಟ್ರಾ  ಡೋಸ್‌ಗಳನ್ನು ಬಳಸಿ ಹೆಚ್ಚುವರಿ ಜನರಿಗೆ ವ್ಯಾಕ್ಸಿನೇಷನ್‌ ಮಾಡಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ನರ್ಸುಗಳು ಅಭಿನಂದನೆಗೆ ಅರ್ಹರು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮರುಟ್ವೀಟ್ ಮಾಡಿ ಕಮೆಂಟಿಸಿರುವ ಪ್ರಧಾನಿ ಮೋದಿ ' ವ್ಯಾಕ್ಸಿನ್ ವೇಸ್ಟೇಜ್ ಕಡಿಮೆ ಮಾಡುತ್ತಿರುವ ಈ ರೀತಿಯ ಆರೋಗ್ಯ ಕಾರ್ಯಕರ್ತರನ್ನು ನೋಡಲು ಖುಷಿಯಾಗುತ್ತಿದೆ. ವ್ಯಾಕ್ಸಿನ್ ವೇಸ್ಟೇಜ್ ಕಡಿಮೆ ಮಾಡುತ್ತಿರುವುದು ಕೋವಿಡ್ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99