ನಾನು ಮಾಸ್ಕ್ ಹಾಕಿಲ್ಲಾಂದ್ರೆ ನೀವ್ಯಾರು ಕೇಳೋಕೆ? : ಪಿಡಿಒಗೆ ಯುವಕನ ಆವಾಝ್
Thursday, May 20, 2021
ಉಳ್ಳಾಲ: ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುವ ವೇಳೆ ಯುವಕನೋರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಉಡಾಫೆಯಿಂದ ವರ್ತಿಸಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ಯದ ಬೆಳರಿಂಗೆ ಬಳಿ ನಡೆದಿದೆ.
ಬೆಳರಿಂಗೆಯ ಸೂಪರ್ ಮಾರ್ಕೆಟ್ ಬಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಬಿ ಎಂಬವರು ಕಚೇರಿ ಸಿಬ್ಬಂದಿ ಅಶ್ರಫ್ ಎಂಬವರೊಂದಿಗೆ ಮಾಸ್ಕ್ ಕುರಿತ ಜಾಗೃತಿ ಮೂಡಿಸುತ್ತಿದ್ದರು.
ಈ ವೇಳೆ ಅಲ್ಲಿ ಮಾಸ್ಕ್ ಇಲ್ಲದೇ ಇದ್ದ ಸಾಕಿರ್ ಎಂಬಾತನಿಗೆ ಮಾಸ್ಕ್ ಧರಿಸಲು ಸೂಚಿಸಿದ್ದು, ಈ ವೇಳೆ ಸಾಕಿರ್ 'ಇದು ನನ್ನ ಖಾಸಗಿ ಸ್ಥಳ. ಮಾಸ್ಕ್ ಧರಿಸದೇ ಇರುವುದನ್ನು ಕೇಳಲು ನೀವು ಯಾರು' ಎಂದೆಲ್ಲಾ ಉಢಾಫೆಯಾಗಿ ವರ್ತಿಸಿದ್ದಾರೆ.
ಪಿಡಿಒ ಅವರ ದೂರಿನ ಮೇರೆಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.