
Mangalore; ಚಪ್ಪಲಿ ಕಚ್ಚಿದ ನಾಯಿಗೆ ಹೀಗೆ ಮಾಡೋದ? ಕುಡ್ಲದಲ್ಲೂ ನಡೆಯಿತು ಅಮಾನವೀಯ ಕೃತ್ಯ! ( video)
ಮಂಗಳೂರು; ಮನೆಯ ಹೊರಗಿಟ್ಟ ಚಪ್ಪಲಿಯೊಂದಕ್ಕೆ ನಾಯಿ ಕಚ್ಚಿದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಅಮಾನವೀಯವಾಗಿ ನಾಯಿಯನ್ನು ಬೈಕ್ ಗೆ ಕಟ್ಟಿ ದರದರನೆ ಎಳೆದುಕೊಂಡು ಹೋದ ಘಟನೆ ನಡೆದಿದೆ.
ಗುಲ್ಬರ್ಗ ಮೂಲದ ಈರಯ್ಯ ಎಂಬಾತ ಈ ಕೃತ್ಯ ಎಸಗಿದವನು. ಈತ ಕೊಂಚಾಡಿಯ ವೈದ್ಯರ ಮನೆಯ ತೋಟದ ಕೆಲಸ ಮಾಡುತ್ತಿದ್ದ .ಇಂದು ಮಧ್ಯಾಹ್ನ ಇವರ ಮನೆಯಲ್ಲಿದ್ದ ಚಪ್ಪಲಿಯನ್ನು ನಾಯಿ ಕಚ್ಚಿತ್ತು. ಇದಕ್ಕೆ ಆಕ್ರೋಶಗೊಂಡ ಈತ ತನ್ನ ಮಗನ ಸಹಾಯದೊಂದಿಗೆ ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದಿದ್ದಾನೆ.
ಈ ಕ್ರೂರ ಕೃತ್ಯದ ದೃಶ್ಯವೊಂದು ಅಪಾರ್ಟ್ಮೆಂಟ್ ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದಲ್ಲಿ ಎನಿಮಲ್ ಕೇರ್ ಟ್ರಸ್ಟ್ ಸದಸ್ಯರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾದ ಬೆನ್ನಿಗೆ ಆರೋಪಿ ಈರಯ್ಯನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆತನ ಮೇಲೆ ಪ್ರಾಣಿ ಹಿಂಸೆ ಮತ್ತು ಲಾಕ್ ಡೌನ್ ನಡುವೆ ಅನವಶ್ಯಕ ತಿರುಗಾಡಿದಕ್ಕೆ ಪ್ರಕರಣ ದಾಖಲಿಸಿದ್ದಾರೆ.