Mangalore- ತೊಕ್ಕೊಟ್ಟಿ ನಲ್ಲಿ ಗೋಲ್ಡನ್ ಸ್ಟಾರ್ ಬೆಂಕಿಗಾಹುತಿ! (video)
Monday, May 31, 2021
ಮಂಗಳೂರು; ತೊಕ್ಕೊಟ್ಟಿನ ಆಟೋಮೊಬೈಲ್ ಮಳಿಗೆ ಗೋಲ್ಡನ್ ಸ್ಟಾರ್ ಬೆಂಕಿ ಅವಘಡದಿಂದ ಧಗಧಗನೆ ಹೊತ್ತಿ ಉರಿದಿದೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಕೊರಗಜ್ಜನ ಕಟ್ಟೆಯ ಬಳಿಯ ಕಟ್ಟಡದಲ್ಲಿ ದ್ವಿಚಕ್ರ ವಾಹನಗಳ ಆಟೋ ಮೊಬೈಲ್ಸ್ ಮಳಿಗೆ ಗೋಲ್ಡನ್ ಸ್ಟಾರ್ ಇದ್ದು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮಂಗಳೂರಿನ ಕುಂಪಲ ನಿವಾಸಿ ಭರತ್ ಎಂಬವರು ಈ ಅಂಗಡಿಯನ್ನು ಬೆಳಗ್ಗೆ ಒಂಬತ್ತು ಗಂಟೆಗೆ ತೆರೆದು ನಂತರ ಏನೋ ಅಗತ್ಯ ಕೆಲಸಕ್ಕಾಗಿ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. ಸ್ವಲ್ಪ ಹೊತ್ತಿನಲ್ಲಿ ಅಂಗಡಿಗೆ ಬೆಂಕಿ ಹತ್ತಿಕೊಂಡಿದ್ದು ಧಗ ಧಗನೆ ಹೊತ್ತಿ ಉರಿದಿದೆ. ಅಂಗಡಿಯೊಳಗಿದ್ದ ಇಲೆಕ್ಟ್ರಾನಿಕ್ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿದೆ. ಅಗ್ನಿಶಾಮಕ ದ ಸಿಬ್ಬಂದಿಗಳು ಮತ್ತು ಸ್ಥಳೀಯರು ಬೆಂಕಿ ನಂದಿಸಿದರು.